'ವೆಸಕ್' ಎಂದೂ ಕರೆಯಲ್ಪಡುವ ಬುದ್ಧ ಪೂರ್ಣಿಮಾ ವಿಶ್ವದಾದ್ಯಂತ ಬೌದ್ಧಧರ್ಮದ ಅನುಯಾಯಿಗಳಿಗೆ ಅತ್ಯಂತ ಪ್ರಮುಖವಾದ ಹಬ್ಬವಾಗಿದೆ. ಈ ಶುಭ ದಿನ ಬೌದ್ಧಧರ್ಮದ ಸಂಸ್ಥಾಪಕನಾದ ಗೌತಮ ಬುದ್ಧನ ಜನನ, ಜ್ಞಾನೋದಯ ಮತ್ತು ಮರಣವನ್ನು ಸೂಚಿಸುತ್ತದೆ ಮತ್ತು ಬೌದ್ಧ ಪಂಥಗಳು ಇದನ್ನು ಬಹಳ ಉತ್ಸಾಹದಿಂದ ಆಚರಿಸುತ್ತವೆ. ಈ ಉತ್ಸವವು ಹಿಂದೂ ತಿಂಗಳ ವೈಶಾಖದ ಮೊದಲ ಹುಣ್ಣಿಮೆಯ ದಿನದಂದು (ಪೂರ್ಣಿಮಾ) ಬರುತ್ತದೆ, ಇದು ಗ್ರೆಗೋರಿಯನ್ ಕ್ಯಾಲೆಂಡರ್ನಲ್ಲಿ ಏಪ್ರಿಲ್-ಮೇಗೆ ಅನುರೂಪವಾಗಿದೆ. ಬುದ್ಧ ಪೂರ್ಣಿಮಾವನ್ನು ಈ ವರ್ಷದಲ್ಲಿ ಮೇ 26 ರಂದು ಆಚರಿಸಲಾಗುತ್ತಿದೆ.
ಭಗವಾನ್ ಬುದ್ಧನ ಜನನ ಮತ್ತು ಮರಣದ ದಿನಾಂಕ ಮತ್ತು ಸಮಯವು ಅನಿಶ್ಚಿತವಾಗಿದ್ದರೂ, ಅವರು ಕ್ರಿ.ಪೂ 6 ಮತ್ತು 4 ನೇ ಶತಮಾನದ ನಡುವೆ ವಾಸಿಸುತ್ತಿದ್ದರು ಎಂಬ ಊಹೆಗಳಿವೆ. ಅವರು ನೇಪಾಳದ ಲುಂಬಿನಿಯಲ್ಲಿ ರಾಜಕುಮಾರ ಸಿದ್ಧಾರ್ಥನಾಗಿ ಜನಿಸಿದರು.
ದಂತಕಥೆಗಳ ಪ್ರಕಾರ, ಅವನ ಜನನಕ್ಕೆ ಮುಂಚೆಯೇ ಮೇಧಾವಿಗಳು ಮತ್ತು ಆಸ್ಥಾನ ಪಂಡಿತರು ಅವನು ಒಬ್ಬ ಮಹಾನ್ ರಾಜ ಅಥವಾ ಮಹಾನ್ ಋಷಿಯಾಗುವ ಭವಿಷ್ಯ ನುಡಿದಿದ್ದರು. ರಾಜಪ್ರಭುತ್ವದ ಐಷಾರಾಮಿಗಳೊಂದಿಗೆ ಬೆಳೆದ ಸಿದ್ಧಾರ್ಥನು ತನ್ನ 20 ರ ದಶಕದ ಅಂತ್ಯದವರೆಗೂ ಮಾನವ ಜೀವನದ ಕಷ್ಟಗಳಿಂದ ರಕ್ಷಿಸಲ್ಪಟ್ಟನು. ಅನಾರೋಗ್ಯ, ವೃದ್ಧಾಪ್ಯ ಮತ್ತು ಮರಣವನ್ನು ನೋಡಿದ ನಂತರ, 29 ವರ್ಷದ ರಾಜಕುಮಾರನು ತನ್ನ ರಾಜಮನೆತನವನ್ನು ತೊರೆಯಲು ನಿರ್ಧರಿಸಿದನು ಮತ್ತು ಎಲ್ಲಾ ದುಃಖಗಳಿಗೆ ಕಾರಣವನ್ನು ಹುಡುಕುವ ಅನ್ವೇಷಣೆಗೆ ಹೊರಟನು.
ಮುಂದಿನ ಕೆಲವು ವರ್ಷಗಳಲ್ಲಿ, ಅವರು ಅನೇಕ ವಿಭಿನ್ನ ಬೋಧನೆಗಳನ್ನು ಗ್ರಹಿಸಿ, ಅರಿತು, ಆಳವಾದ ಅಧ್ಯಯನ ಮಾಡಿದರು. ಆದರೆ ಅದರಿಂದ ಸಿಗುತ್ತಿದ್ದ ಉತ್ತರಗಳು ಅವರನ್ನು ಸಂತೃಪ್ತಿ ಪಡಿಸಲಾಗಲಿಲ್ಲ. ಒಂದು ದಿನ ಭೋದಿ ವೃಕ್ಷದ ಕೆಳಗೆ ಅವರು ಆಳವಾದ ಧ್ಯಾನಕ್ಕೆ ಹೋದರು ಮತ್ತು ಅವರು ಬಯಸುತ್ತಿರುವ ಎಲ್ಲಾ ಉತ್ತರಗಳೊಂದಿಗೆ ಎಚ್ಚರಗೊಂಡರು. ಈ ರೀತಿಯಾಗಿ 35 ನೇ ವಯಸ್ಸಿನಲ್ಲಿ ಸಿದ್ಧಾರ್ಥನು, ಗೌತಮ ಬುದ್ಧನಾದನು. ತನ್ನ ಜೀವನದುದ್ದಕ್ಕೂ, ಇತರ ಜನರನ್ನು ಜ್ಞಾನೋದಯದ ಹಾದಿಯಲ್ಲಿ ಸಾಗಿಸಲು ಧರ್ಮವನ್ನು ಬೋಧಿಸಿದನು. ಗೌತಮ ಬುದ್ಧನು ತನ್ನ 80ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಕುಶಿನಗರದಲ್ಲಿ ಕೊನೆಯುಸಿರೆಳೆದನು.
ಗೌತಮ ಬುದ್ಧನ ಜೀವನದ ಮೂರು ಪ್ರಮುಖ ಘಟನೆಗಳು
- ಅವನ ಜನನ
- ಜ್ಞಾನೋದಯ
- ಮೋಕ್ಷ
''ಬುದ್ಧನ ಜನ್ಮ ವಾರ್ಷಿಕೋತ್ಸವವನ್ನು ವೈಶಾಖದ ಮೊದಲ ಹುಣ್ಣಿಮೆಯ ದಿನದಂದು ಆಚರಿಸುವ ನಿರ್ಧಾರವನ್ನು "world fellowship of Buddhists" 1960 ರ ಮೇನಲ್ಲಿ ತೆಗೆದುಕೊಂಡಿತು.''
ಭಾರತದಾದ್ಯಂತ ಬುದ್ಧ ಪೂರ್ಣಿಮಾ ಆಚರಣೆಗಳು
- ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ, ಅನೇಕ ಭಕ್ತರು ಬೌದ್ಧ ದೇವಾಲಯಗಳಿಗೆ ಭೇಟಿ ನೀಡುತ್ತಾರೆ.
- ಭಗವಾನ್ ಬುದ್ಧನ ಜೀವನ ಮತ್ತು ಅವರ ಬೋಧನೆಗಳು ಮತ್ತು ತತ್ವಗಳ ಬಗ್ಗೆ ಸ್ತುತಿಗೀತೆಗಳನ್ನು ಮತ್ತು ಧರ್ಮೋಪದೇಶಗಳನ್ನು ಪಠಿಸುತ್ತಾರೆ.
- ಬುದ್ಧನ ವಿಗ್ರಹವನ್ನು ಪೂಜಿಸಲು ಹೂವುಗಳು ಮತ್ತು ಮೇಣದ ಬತ್ತಿಗಳನ್ನು ಅರ್ಪಿಸಲಾಗುತ್ತದೆ, ಬುದ್ಧನ ಮೂರ್ತಿಯನ್ನು ನೀರಿನಿಂದ ತುಂಬಿದ ಗಾಜಿನ ಬುಟ್ಟಿಯಲ್ಲಿ ಇರಿಸಿರಲಾಗಿರುತ್ತದೆ.
- ಬುದ್ಧನ ಬೋಧನೆಗಳನ್ನು ಈ ದಿನದಂದು ಪ್ರಾಮಾಣಿಕತೆಯಿಂದ ಅನುಸರಿಸಲಾಗುತ್ತದೆ.
- ಬಡವರಿಗೆ ದಿನಸಿ ಮತ್ತು ಸಿಹಿಯನ್ನು ನೀಡುತ್ತಾರೆ.
- ಶುದ್ಧತೆಯ ಪ್ರತೀಕವಾಗಿ ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ.
No comments:
Post a Comment