ದಿನಾಂಕ 15 ಮೇ 2021ನ್ನು ಅಂತಾರಾಷ್ಟ್ರೀಯ ಕುಟುಂಬ ದಿನ ಎಂದು ಆಚರಿಸಲಾಗುತ್ತದೆ. ಈ ದಿನ ಪ್ರಾರಂಭವಾಗಿದ್ದು ಯಾವಾಗಿನಿಂದ? ಏನಿದರ ಇತಿಹಾಸ, ಮಹತ್ವ! ಈ ವರ್ಷದ ಥೀಮ್ ಏನು ಹೀಗೆ ಹಲವಾರು ಮಾಹಿತಿಗಳನ್ನು ಇಲ್ಲಿ ತಿಳಿಯೋಣ.
ಮೇ 15 ಅನ್ನು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಕುಟುಂಬಗಳ ದಿನವಾಗಿ ಆಚರಿಸಿದೆ. ಇಡೀ ದಿನವನ್ನು ಕುಟುಂಬಗಳಿಗೆ ಅರ್ಪಿಸಲು ಮತ್ತು ಅವರ ಪ್ರಾಮುಖ್ಯತೆಯನ್ನು ಪ್ರಶಂಸಿಸಲು 1993 ರಲ್ಲಿ ಯುಎನ್ ಜನರಲ್ ಅಸೆಂಬ್ಲಿಯಿಂದ ಅಂತಾರಾಷ್ಟ್ರೀಯ ಕುಟುಂಬಗಳ ದಿನವನ್ನು ಘೋಷಿಸಲಾಯಿತು. 1994 ರಿಂದ ಮೇ 15 ಅನ್ನು ಕುಟುಂಬ ದಿನವೆಂದು ಆಚರಿಸಲಾಗುತ್ತದೆ.
1996 ರಿಂದ, ಪ್ರತಿ ವರ್ಷ ಜಾಗತಿಕ ವರ್ತಮಾನವನ್ನು ಗಮನಿಸಿ ಈ ದಿನವನ್ನು ಪ್ರಶಂಸಿಸಲು ಥೀಮ್ ಅನ್ನು ನಿಗದಿಪಡಿಸಲಾಯಿತು.
“ಎಲ್ಲಾ ವಯಸ್ಸಿನ ವರ್ಗಗಳಿಗೂ ಕುಟುಂಬಗಳು”
“ಕುಟುಂಬಗಳು: ಶಿಕ್ಷಣ ಮತ್ತು ಮಾನವ ಹಕ್ಕುಗಳ ಪೂರೈಕೆದಾರರು”.
“ಕುಟುಂಬಗಳು ಮತ್ತು ಅಂತರ್ಗತ ಸಮಾಜಗಳು”
“ಪುರುಷರ ಕುಟುಂಬ? ಸಮಕಾಲೀನ ಕುಟುಂಬಗಳಲ್ಲಿ ಲಿಂಗ ಸಮಾನತೆ ಮತ್ತು ಮಕ್ಕಳ ಹಕ್ಕುಗಳು".
ಹೀಗೆ ಪ್ರತಿವರ್ಷವೂ ಒಂದೊಂದು ಜಾಗತಿಕ ಮಟ್ಟದಲ್ಲಿ ಬೆಳವಣಿಗೆಯ ಆಧಾರದ ಮೇಲೆ ಒಂದು ಥೀಮ್ ನೊಂದಿಗೆ ಈ ದಿನವನ್ನು ಆಚರಿಸುತ್ತಾ ಬರಲಾಗಿದೆ.
ಈ ವರ್ಷದ ಅಂತಾರಾಷ್ಟ್ರೀಯ ಕುಟುಂಬಗಳ ದಿನದ ವಿಷಯವೆಂದರೆ
"ಕುಟುಂಬಗಳು ಮತ್ತು ಹೊಸ ತಂತ್ರಜ್ಞಾನಗಳು."
ಈ ವರ್ಷದ ವಿಷಯದ ಹಿನ್ನೆಲೆ ಏನೆಂದರೆ,
''ದೀರ್ಘಕಾಲದಿಂದ ಇರುವ COVID-19 ಸಾಂಕ್ರಾಮಿಕವು ಕೆಲಸ, ಶಿಕ್ಷಣ ಮತ್ತು ಸಂವಹನಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳ ಮಹತ್ವವನ್ನು ತೋರಿಸಿದೆ. ಸಾಂಕ್ರಾಮಿಕವು ಈಗಾಗಲೇ ಸಮಾಜದಲ್ಲಿ ಮತ್ತು ಕೆಲಸದಲ್ಲಿ ನಡೆಯುತ್ತಿರುವ ತಾಂತ್ರಿಕ ಬದಲಾವಣೆಗಳನ್ನು ವೇಗಗೊಳಿಸಿದೆ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಹೆಚ್ಚಿನ ಬಳಕೆ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಂತಹ ತಾಂತ್ರಿಕ ಆವಿಷ್ಕಾರಗಳು ಮತ್ತು ದೊಡ್ಡ ಡೇಟಾ ಮತ್ತು ಕ್ರಮಾವಳಿಗಳ ಬಳಕೆ "
ಹೀಗೆ ಹಲವಾರು ಬದಲಾವಣೆಗಳು ಅತಿ ವೇಗವಾಗಿ ಆಗುತ್ತಿರುವ ಪರಿಣಾಮವೇ ಈ ವಿಷಯವನ್ನು ಈ ವರ್ಷದ ಥೀಮ್ ಆಗಿ ಇಡಲು ಕಾರಣವಾಗಿದೆ.
ಕುಟುಂಬದ ಮಹತ್ವ
- ಕುಟುಂಬವು ಮಾನವ ಸಮಾಜದ ಮೊದಲ ಅತ್ಯಗತ್ಯ ಕೋಶವಾಗಿದೆ.
- ನಾವು ಪ್ರತಿ ದಿನ ನಗುತ್ತಿರುವಂತೆ ಮಾಡುವುದು ನಮ್ಮ ಕುಟುಂಬ.
- ಯಾವುದೇ ವಿಷಯಗಳು ನಮ್ಮನ್ನು ಬದಲಾಯಿಸಬಹುದು, ಆದರೆ ನಾವು ನಮ್ಮ ಜೀವನವನ್ನು ಕುಟುಂಬದೊಂದಿಗೆ ಪ್ರಾರಂಭಿಸುತ್ತೇವೆ ಮತ್ತು ಕೊನೆಗೊಳಿಸುತ್ತೇವೆ.
- ಕುಟುಂಬ ಎಂಬುದು ನಿಮಗೆ ಅದ್ಭುತವಾದ ಒಂದು ಭಾಗ. ಇದರರ್ಥ ನೀವು ನಿಮ್ಮ ಜೀವನದುದ್ದಕ್ಕೂ ಪ್ರೀತಿಸುತ್ತೀರಿ ಮತ್ತು ಪ್ರೀತಿಸಲ್ಪಡುತ್ತೀರಿ.
- ನಾವು ದಾರಿತಪ್ಪಿದಾಗ ನಮಗೆ ಮಾರ್ಗದರ್ಶನ ನೀಡುವ ದಿಕ್ಸೂಚಿ ಕುಟುಂಬ. ಅದು ನಮ್ಮಲ್ಲಿ ಭರವಸೆ ಮತ್ತು ಪ್ರೇರಣೆಯನ್ನು ತುಂಬುತ್ತದೆ.
- ಪ್ರೀತಿ ಅಂದರೆ ಏನು ಎಂದು ಕಲಿಸುವುದೇ ಕುಟುಂಬ.
- ನಿಮ್ಮನ್ನು ಸದಾ ಬೆಂಬಲಿಸುವ ಏಕೈಕ ಭಾಗವೇ ಕುಟುಂಬ.
ಹೀಗೆ ನಾವು ಕುಟುಂಬದ ಮಹತ್ವವನ್ನು ಸಾರಿ ಹೇಳಬಹುದು. ಇದು ಕೇವಲ ನಮ್ಮ ಕುಟುಂಬದ ದಿನವಾಗದೆ, ಎಲ್ಲರೂ ಇಡೀ ವಿಶ್ವವನ್ನೇ ನಮ್ಮ ಕುಟುಂಬ ಎಂದು ಭಾವಿಸಿ ಇಡೀ ವಿಶ್ವವನ್ನು ಸಮಾನ ದೃಷ್ಟಿಯಿಂದ ನೋಡಬೇಕು ಎಂಬುದೇ ಈ ದಿನದ ಆಶಯವಾಗಿದೆ.
No comments:
Post a Comment