ಯು.ಪಿ.ಎಸ್.ಸಿ ಸಿವಿಲ್ ಸರ್ವೀಸ್ ಪರೀಕ್ಷೆಗಳಿಗೆ, ಯಾವುದೇ ಪದವಿ ಅಥವಾ ಬಿ.ಎ ಡಿಗ್ರಿಯಲ್ಲಿ ಓದಿದ ವಿಷಯಗಳು ಸಹಾಯವಾಗುತ್ತದೆ ಎಂಬುದು ತೀರ ಒಳ್ಳೆಯ ನಿರ್ಧಾರವಲ್ಲ. ಆದರೆ ಪರೀಕ್ಷೆ ತೆಗೆದುಕೊಂಡ ನಂತರ ಎಷ್ಟು ಪರಿಣಾಮಕಾರಿಯಾಗಿ ಓದುತ್ತೇನೆ ಎಂಬುದು ಮುಖ್ಯ, ಕಾರಣ ಇಂದು ಇಂಜಿನಿಯರಿಂಗ್, ಡಾಕ್ಟರ್, ಎಂ.ಎಸ್ಸಿ, ಎಂ.ಟೆಕ್ ಓದಿದವರು ನಂತರದಲ್ಲಿ ಕಲಾ ವಿಷಯಗಳನ್ನೇ ನಾಗರೀಕ ಸೇವೆಗಳ ಮುಖ್ಯ ಪರೀಕ್ಷೆಗೆ ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಯಶಸ್ಸು ಕಂಡವರಿದ್ದಾರೆ.
ಯಾವ ಡಿಗ್ರಿ ಅಥವಾ ಬಿ.ಎ ಸಬ್ಜೆಕ್ಟ್ ಐ.ಎ.ಎಸ್, ಇತರೆ ಸಿ.ಎಸ್.ಐ. ಪರೀಕ್ಷೆಗಳಿಗೆ ಅನುಕೂಲವಾಗಲಿದೆ ಎಂದು ಹೇಳಬೇಕೆಂದರೆ:
- ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿಎ, ಬಿ.ಸಿಎ ಹೀಗೆ ಇನ್ನೂ ಹಲವು ಪದವಿಗಳ ಪೈಕಿ ಬಿ.ಎ ಪದವಿಯಲ್ಲಿನ ಹಲವು ವಿಷಯಗಳನ್ನು ಅಧ್ಯಯನ ಮಾಡುವುದು ಕೇಂದ್ರ ಸೇವೆಗಳ ಪರೀಕ್ಷೆಗೆ ಅನುಕೂಲವಾಗಲಿದೆ.
- ಪದವಿ ಮುಗಿದ ನಂತರವೂ ಐ.ಎ.ಎಸ್ ಪರೀಕ್ಷೆಯ ಮುಖ್ಯ ಪರೀಕ್ಷೆಯಲ್ಲಿ ಯಾವ ವಿಷಯವನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಳ್ಳುತ್ತೀರೋ ಅದನ್ನು ಪುನಃ ಧೀರ್ಘವಾಗಿ ಅಧ್ಯಯನ ಮಾಡಬೇಕಾಗುತ್ತದೆ.
- ಇನ್ನೂ ಒಂದು ವಿಷಯವನ್ನು ನೆನಪಿನಲ್ಲಿ ಇಡಲೇಬೇಕು. ಐ.ಎ.ಎಸ್ ಮುಖ್ಯ ಪರೀಕ್ಷೆಗೆ ಐಚ್ಛಿಕ ವಿಷಯ ಓದುವುದು ಪದವಿಯಲ್ಲಿ ಪೊಲಿಟಿಕಲ್ ಸೈನ್ಸ್ ಓದಿದ ರೀತಿ ಅಲ್ಲ. ಆ ವಿಷಯಗಳನ್ನು ಆಳವಾಗಿ ಅರ್ಥೈಸಿಕೊಂಡು ಓದಬೇಕಾಗುತ್ತದೆ.
- ಐ.ಎ.ಎಸ್. ಪರೀಕ್ಷೆಗೆ ಸಹಾಯವಾಗುವ ಬಿ.ಎ ಡಿಗ್ರಿ ಓದಲೇಬೇಕು ಎಂದುಕೊಂಡಲ್ಲಿ, ಯು.ಪಿ.ಎಸ್.ಸಿ ಸಿ.ಎಸ್.ಇ ಜೆನೆರಲ್ ಸ್ಟಡೀಸ್ ಪೇಪರ್ಗೂ ಅನುಕೂಲವಾಗುವ ಇತಿಹಾಸ, ಪೊಲಿಟಿಕಲ್ ಸೈನ್ಸ್, ಜಿಯೋಗ್ರಫಿ, ಅರ್ಥಶಾಸ್ತ್ರ, ಪತ್ರಿಕೋದ್ಯಮ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ ಮತ್ತು ಇತರೆ ವಿಷಯಗಳನ್ನು ಒಳಗೊಂಡಿರುವ ಬಿ.ಎ ಪದವಿ ಓದಿದರೆ ಅನುಕೂಲವಾಗುತ್ತದೆ.(ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಯಶಸ್ಸು ಹೊಂದಿದವರು ಹೇಳಿರುವ ವಿಚಾರ)
- ನೀವು ಸಿವಿಲ್ ಸರ್ವೀಸ್ ಪರೀಕ್ಷೆಯ ಮುಖ್ಯ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವಾಗಿ ಯಾವುದನ್ನು ತೆಗೆದುಕೊಳ್ಳಬೇಕು ಎಂದುಕೊಂಡಿರುತ್ತೀರೋ ಆ ಸಬೈಕ್ಸ್ ಇರುವ ಕಾಂಬಿನೇಷನ್ ಕೋರ್ಸ್ ಅನ್ನು ಓದಿರಿ.
ದೂರಶಿಕ್ಷಣ ಅಥವಾ ಕರೆಸ್ಪೊಂಡಿಂಗ್ ಪದವಿ ಓದಿದವರು ಐ.ಎ.ಎಸ್ ಪರೀಕ್ಷೆ ಬರೆಯಬಹುದೇ?
ಯು.ಪಿ.ಎಸ್.ಸಿ ಸಿವಿಲ್ ಸೇವೆ ಪರೀಕ್ಷೆ ತೆಗೆದುಕೊಳ್ಳಲು ಯಾವುದೇ ಪದವಿಯನ್ನು ಪಾಸ್ ಮಾಡಿರಬೇಕು. ಪದವಿಯನ್ನು ದೂರಶಿಕ್ಷಣ/ಕರೆಸ್ಪಾಡೆನ್ಸ್ / ರೆಗ್ಯುಲರ್ ಮೂಲಕ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದಾದರೂ ವಿಶ್ವವಿದ್ಯಾಲಯದಿಂದ ಪಡೆದಿರಬೇಕು. ಕೇಂದ್ರ ಲೋಕಸೇವಾ ಆಯೋಗವು ಒಟ್ಟು 24 ಸೇವೆಗಳಿಗೆ ನಾಗರಿಕ ಸೇವೆಗಳ ಪರೀಕ್ಷೆಯನ್ನು ನಡೆಸುತ್ತದೆ. ಈ ಪರೀಕ್ಷೆಯು ಮೂರು ಹಂತಗಳಾದ ಪೂರ್ವಭಾವಿ ಪರೀಕ್ಷೆ , ಮುಖ್ಯ ಪರೀಕ್ಷೆ , ಸಂದರ್ಶನ ಹಂತಗಳನ್ನು ಒಳಗೊಂಡಿರುತ್ತದೆ.
No comments:
Post a Comment