ಚಹಾ ಕಾರ್ಮಿಕರ ಸಮಸ್ಯೆಗಳು, ಅವರ ಕೊಡುಗೆಗಳು ಮತ್ತು ಅವರ ಪರಿಸ್ಥಿತಿಗಳ ಬಗ್ಗೆ ಅರಿತುಕೊಳ್ಳಲು ಅಂತರರಾಷ್ಟ್ರೀಯ ಚಹಾ ದಿನವನ್ನು ಡಿಸೆಂಬರ್ 15, 2005 ರಂದು ಭಾರತದ ನವದೆಹಲಿಯಲ್ಲಿ ಹಮ್ಮಿಕೊಳ್ಳಲಾಯಿತು. 2004 ರಲ್ಲಿ ಭಾರತದ ಮುಂಬೈನಲ್ಲಿ ನಡೆದ ವಿಶ್ವ ಸಾಮಾಜಿಕ ವೇದಿಕೆಯಲ್ಲಿ ಮತ್ತು 2005 ರಲ್ಲಿ ಬ್ರೆಜಿಲ್‌ನ ಪೋರ್ಟೊ ಅಲೆಗ್ರೆನಲ್ಲಿ ಹಲವಾರು ಕಾರ್ಮಿಕ ಸಂಘಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಸಭೆ ನಡೆಸಿ ಅಂತರರಾಷ್ಟ್ರೀಯ ಚಹಾ ದಿನವನ್ನು ಆಚರಿಸಲು ನಿರ್ಧರಿಸಿದವು. ಚಹಾ ತೋಟಗಳು, ವೇತನ, ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆ, ಕಾರ್ಮಿಕ ಹಕ್ಕುಗಳು, ಕಾರ್ಮಿಕರ ಅಂತರರಾಷ್ಟ್ರೀಯ ಹಿತಾಸಕ್ತಿಗಳು, ಸಣ್ಣ ಬೆಳೆಗಾರರು, ಉದ್ಯೋಗಿಕ ಸುರಕ್ಷತೆ ಮತ್ತು ಮಹಿಳೆಯರ ಆರೋಗ್ಯದ ಬಗ್ಗೆ ಮಾನದಂಡಗಳನ್ನು ನಿಗದಿಪಡಿಸಿದರು ಮತ್ತು ಚಹಾ ಕಾರ್ಮಿಕರ ಮತ್ತು ಸಣ್ಣ ಬೆಳೆಗಾರರ ಹಕ್ಕುಗಳ ಘೋಷಣೆಯನ್ನೂ ಈ ದಿನ ಜಾರಿಗೆ ತಂದರು.
ಎಲ್ಲಿ ಆಚರಿಸಲಾಗುತ್ತದೆ ?!!
ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಇಂಡೋನೇಷ್ಯಾ, ಮಲೇಷ್ಯಾ, ವಿಯೆಟ್ನಾಂ, ಕೀನ್ಯಾ, ಉಗಾಂಡಾ, ಟಾಂಜಾನಿಯಾ ಮತ್ತು ಮಲಾವಿ ಸೇರಿದಂತೆ ವಿಶ್ವದಾದ್ಯಂತ ಪ್ರಮುಖ ಚಹಾ ಬೆಳೆಯುವ ರಾಷ್ಟ್ರಗಳಲ್ಲಿ ಅಂತರರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ.
ಈ ದಿನದಂದು ಕಾರ್ಮಿಕ ಸಂಘಗಳು, ಕಾರ್ಮಿಕರ ಸಂಘಟನೆಗಳು ಮತ್ತು ಇತರ ನಾಗರಿಕ ಸಮಾಜ ಸಂಸ್ಥೆಗಳು ಒಗ್ಗೂಡಿ ಸೆಮಿನಾರ್‌ಗಳು, ಸಂವಾದಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸರ್ಕಾರಗಳಿಗೆ ಜ್ಞಾಪಕ ಪತ್ರ / ಚಾರ್ಟರ್ ಸಲ್ಲಿಸುತ್ತವೆ.
ಈ ಆಚರಣೆಯು ಭಾರತದ ಸಣ್ಣ ಚಹಾ ಬೆಳೆಗಾರರಲ್ಲಿ ಸಾಮೂಹೀಕರಣದ ಪ್ರಜ್ಞೆಯನ್ನು ಹೆಚ್ಚಿಸಲು ಕಾರಣವಾಗಿದೆ ಮತ್ತು ಭಾರತದ ಸಣ್ಣ ಚಹಾ ಬೆಳೆಗಾರರ ಪ್ರತಿನಿಧಿ ಅಂಗವಾಗಿ ಭಾರತೀಯ ಸಣ್ಣ ಚಹಾ ಬೆಳೆಗಾರರ ಸಂಘಗಳ ಒಕ್ಕೂಟವನ್ನು ಬಲಪಡಿಸಿದೆ. ಚಹಾ ಸಂಸ್ಕೃತಿಯನ್ನು ಆಚರಿಸಲು ಮತ್ತು ಚಹಾ ಉತ್ಪಾದಿಸುವ ದೇಶಗಳಿಗೆ ಪ್ರಮುಖ ರಫ್ತು ಬೆಳೆಯಾಗಿ ಚಹಾದ ಮಹತ್ವವನ್ನು ಗುರುತಿಸಲು ಈ ದಿನವನ್ನು ಉದ್ದೇಶಿಸಲಾಗಿದೆ.
ಚಹಾ ಕಾರ್ಮಿಕರು ನಿಯಮಿತವಾಗಿ ವ್ಯವಹರಿಸುವ ಈ ಕೆಳಗಿನ ವಿಷಯಗಳ ಬಗ್ಗೆ ಈ ದಿನ ಬೆಳಕು ಚೆಲ್ಲುತ್ತದೆ.
- ಚಹಾ ತೋಟಗಳಲ್ಲಿನ ಕಾರ್ಮಿಕರು ವಸತಿ ಹಕ್ಕುಗಳ ರಕ್ಷಣೆಯನ್ನು ಬಯಸುತ್ತಾರೆ.
- ಚಹಾ ಕಾರ್ಮಿಕರು ತಮ್ಮ ವೇತನ ಹೆಚ್ಚಿಸಬೇಕೆಂದು ಬಯಸುತ್ತಾರೆ.
- ಚಹಾ ತೋಟಗಳಲ್ಲಿ ಸುಧಾರಿತ ನೈರ್ಮಲ್ಯ ಮತ್ತು ಶುದ್ಧ, ಕುಡಿಯುವ ನೀರು ಆದ್ಯತೆಗಳಾಗಿವೆ.
- ಗ್ರಾಮೀಣ ಪ್ರದೇಶದ ಚಹಾ ಕಾರ್ಮಿಕರಿಗೆ ವೈದ್ಯಕೀಯ ಆರೈಕೆಯ ಕೊರತೆ ಇದೆ.
- ಚಹಾ ತೋಟಗಳಲ್ಲಿ ಮಹಿಳೆಯರು ಶೇಕಡಾ 50 ಕ್ಕಿಂತ ಹೆಚ್ಚು ಉದ್ಯೋಗಿಗಳಾಗಿದ್ದಾರೆ ಮತ್ತು ಶಿಕ್ಷಣಕ್ಕೆ ಪ್ರವೇಶವನ್ನು ಹೊಂದಿರುವುದು ಕಡಿಮೆ.
ಈ ದಿನವನ್ನು ಹೇಗೆಲ್ಲ ಆಚರಿಸಬಹುದು!!
- ಚಹಾ ಚಿಲ್ಲರೆ ವ್ಯಾಪಾರಿಗಳು ಈ ದಿನವನ್ನು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಗ್ರಾಹಕರನ್ನು ತೊಡಗಿಸಿಕೊಳ್ಳುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡಬಹುದು.
- ಚಹಾ ತೋಟಗಳಲ್ಲಿ ಕೆಲಸ ಮಾಡುವ ಹುಡುಗಿಯರಿಗೆ ಶಿಕ್ಷಣ ನೀಡುವುದನ್ನು ಬೆಂಬಲಿಸುವ ಚಾರಿಟಿಯನ್ನು ಉತ್ತೇಜಿಸುವುದು.
- ಚಹಾ ತೋಟದ ಕಾರ್ಮಿಕರಿಗೆ ವೈದ್ಯಕೀಯ ಆರೈಕೆಯನ್ನು ಒದಗಿಸುವ ನ್ಯಾಷನಲ್ ಹೆಲ್ತ್ ಮಿಷನ್ ಆಫ್ ಇಂಡಿಯಾದ ಮೊಬೈಲ್ ವೈದ್ಯಕೀಯ ಘಟಕಗಳಿಗೆ ಸಹಾಯಧನ ನೀಡುವುದು.
ಇನ್ನೂ ಏನಾದರೂ ನೂತನ ರೀತಿಯಲ್ಲಿ ಹೊಳೆದರೆ ನೀವೂ ಮಾಡಬಹುದು.
ಈ ವರ್ಷದ ಥೀಮ್ - “Tea and Fair Trade”
ಚಹಾ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಆರೋಗ್ಯಕರ ಚಹಾಗಳ ದೈನಂದಿನ ಕಪ್ ನಿಮಗೆ ಹೇಗೆ ಉತ್ತಮವಾಗಬಹುದು ಎಂಬುದು ತಿಳಿದಿದೆಯೇ!!- ಯಾವ ಋತುವಿರಲಿ, ಚಹಾವು ರುಚಿಯಾದ ಪಾನೀಯವಾಗಬಹುದು ಏಕೆಂದರೆ ಇದನ್ನು ತಂಪಾಗಿ ಅಥವಾ ಬಿಸಿಯಾಗಿ ನೀಡಬಹುದು.
- "ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿ" ಅವರ ಸಂಶೋಧನೆಯ ಪ್ರಕಾರ ನಿಯಮಿತವಾಗಿ ಚಹಾ ಸೇವಿಸುವುದರಿಂದ ಹೃದಯರಕ್ತನಾಳದ ಕಾಯಿಲೆಗಳ ಸಾಧ್ಯತೆ ಕಡಿಮೆ. ಪಾರ್ಶ್ವವಾಯು ಮತ್ತು ಅಕಾಲಿಕವಾಗಿ ಮರಣ ಹೊಂದುವುದು ಕೂಡ ಕಡಿಮೆ.
- ಚಹಾ ಕುಡಿಯುವುದು ಆರೋಗ್ಯವನ್ನು ಉತ್ತೇಜಿಸುವ ಜೀವನಶೈಲಿ ವರ್ತನೆಯಾಗಿ ಪರಿಣಮಿಸಿದೆ.
- ರಕ್ತದೊತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯ ಚಹಾಗೆ ಇದೆ.
- ಹಸಿರು ಚಹಾ, ಫ್ಲೇವೊನೈಡ್ಗಳ ಸಮೃದ್ಧ ಮೂಲವಾಗಿದೆ, ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ, ಉರಿಯೂತವನ್ನು ನಿವಾರಿಸುತ್ತದೆ ಮತ್ತು ಇತರ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಮತ್ತೊಮ್ಮೆ ವಿಶ್ವ ಚಹಾ ದಿನದ ಹಾರ್ಧಿಕ ಶುಭಾಶಯಗಳು..
No comments:
Post a Comment