ಈ ದಿನ 15 ಮೇ 2021ನ್ನು ನಾವು ವಿಶ್ವ ಖಗೋಳವಿಜ್ಞಾನ ದಿನ ಎಂದು ಆಚರಿಸುತ್ತೇವೆ. ಈ ದಿನವು ಹೇಗೆ ಆಚರಿಸಲಾಯಿತು, ಈ ದಿನದ ಉದ್ದೇಶ ಮತ್ತು ಇತಿಹಾಸವನ್ನು ಇಲ್ಲಿ ತಿಳಿಯೋಣ.
ನಾವು ಇತಿಹಾಸವನ್ನು ನೋಡುತ್ತಾ ಬಂದರೆ ಬಾಹ್ಯಾಕಾಶ ಮತ್ತು ಖಗೋಳವಿಜ್ಞಾನದ ರಹಸ್ಯಗಳು ಜಗತ್ತನ್ನು ಆಕರ್ಷಿಸಿವೆ. ಸ್ಪಷ್ಟವಾದ ಸಂಜೆ ರಾತ್ರಿಯ ಆಕಾಶವನ್ನು ನೋಡುವುದರಿಂದ ವಿಶ್ವ ಎಷ್ಟು ದೊಡ್ಡದಾಗಿದೆ ಎಂದು ಊಹಿಸಲು ಸಾಧ್ಯವಿಲ್ಲ ಮತ್ತು ಅಸಾಧ್ಯ ಕೂಡ. ಅನಂತ ವಿಶ್ವವನ್ನು ತಿಳಿಯಲು ಪ್ರಯತ್ನಿಸಿದಷ್ಟು ಆಶ್ಚರ್ಯ ಮತ್ತು ಕುತೂಹಲ ಮೂಡುತ್ತಲೇ ಇರುತ್ತದೆ.
ಅಂತರರಾಷ್ಟ್ರೀಯ ಖಗೋಳವಿಜ್ಞಾನ ದಿನವು ಖಗೋಳವಿಜ್ಞಾನ ಉತ್ಸಾಹಿಗಳು ಮತ್ತು ವೃತ್ತಿಪರರು ತಮ್ಮ ಜ್ಞಾನ ಮತ್ತು ಬಾಹ್ಯಾಕಾಶದ ಪ್ರೀತಿಯನ್ನು ಸಾಮಾನ್ಯ ಜನರೊಂದಿಗೆ ಹಂಚಿಕೊಳ್ಳಲು ಇರುವ ಒಂದು ಮಾರ್ಗವಾಗಿದೆ. ಬಾಹ್ಯಾಕಾಶದಲ್ಲಿ ಆಸಕ್ತಿ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಉತ್ಸಾಹವನ್ನು ಅನ್ವೇಷಿಸಲು ಮತ್ತು ಅವರ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇದು ಒಂದು ಮಾರ್ಗವಾಗಿದೆ.
ಬಾಹ್ಯಾಕಾಶದ ಬಗ್ಗೆ ವಿಶೇಷವಾಗಿ ಉತ್ಸಾಹ ಇರುವವರಿಗೆ, ಈ ದಿನವನ್ನು ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಬದಲಾಗುತ್ತಿರುವ ನಕ್ಷತ್ರಪುಂಜಗಳು ಮತ್ತು ಬಾಹ್ಯಾಕಾಶದಲ್ಲಿ ವರ್ಷದ ವಿವಿಧ ಸಮಯಗಳಲ್ಲಿ ಗಮನಿಸಬೇಕಾದ ವಿವಿಧ ವಿಷಯಗಳನ್ನು ತಿಳಿಯಲು, ವಸಂತ ಋತುವಿನಲ್ಲಿ ಮತ್ತು ಶರತ್ಕಾಲದಲ್ಲಿ ಹೀಗೆ ಎರಡು ಬಾರಿ ಆಚರಿಸಲಾಗುತ್ತದೆ.
ಅಂತರರಾಷ್ಟ್ರೀಯ ಖಗೋಳವಿಜ್ಞಾನ ದಿನದ ಇತಿಹಾಸ
ಉತ್ತರ ಕ್ಯಾಲಿಫೋರ್ನಿಯಾದ ಖಗೋಳ ಸಂಘದ ಅಂದಿನ ಅಧ್ಯಕ್ಷರಾಗಿದ್ದ ಡೌಗ್ ಬರ್ಗರ್ ಅವರು 1973 ರಲ್ಲಿ ಈ ದಿನವನ್ನು ಪ್ರಾರಂಭಿಸಿದರು. ಎಲ್ಲರೂ ಸುಲಭವಾಗಿ ತಲುಪುವ ಸಲುವಾಗಿ ನಗರ ಸ್ಥಳಗಳಲ್ಲಿ ದೂರದರ್ಶಕಗಳನ್ನು ಸ್ಥಾಪಿಸುವ ಮೂಲಕ ದಿನವನ್ನು ಆಚರಿಸಲಾಯಿತು. ಖಗೋಳವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಮತ್ತು ಅದರ ಬಗ್ಗೆ ತಿಳಿಯಲು ಸಾರ್ವಜನಿಕರಿಗೆ ಪ್ರವೇಶವನ್ನು ನೀಡಲು ಅವರು ಬಯಸಿದ್ದರು.
ಈಗ, ಇಡೀ ಪ್ರಪಂಚ, ಅನೇಕ ಸಂಸ್ಥೆಗಳು ಮತ್ತು ಗುಂಪುಗಳನ್ನು ಖಗೋಳಶಾಸ್ತ್ರದೆಡೆಗೆ ಒಲವು ಮೂಡಿಸಲು ಈ ದಿನವನ್ನು ವರ್ಷಕ್ಕೆ ಎರಡು ದಿನಗಳಿಗೆ ವಿಸ್ತರಿಸಲಾಗಿದೆ. ಶರತ್ಕಾಲದಲ್ಲಿ ಎರಡನೇ ಸಲದ ಆಚರಣೆಯನ್ನು ಸೇರಿಸಲು 2006 ರಲ್ಲಿ ತಿದ್ದುಪಡಿ ಮಾಡಲಾಯಿತು. ಆಕರ್ಷಕ ವಿಷಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇದು ಉತ್ತಮ ಮಾರ್ಗವಾಗಿದೆ, ಕುಟುಂಬ, ಸ್ನೇಹಿತರು ಮತ್ತು ಅದೇ ಆಸಕ್ತಿಗಳನ್ನು ಹಂಚಿಕೊಳ್ಳುವ ಇತರ ಜನರೊಂದಿಗೆ ಸಮಯ ಕಳೆಯಲು ಇದು ಒಂದು ಪ್ರಮುಖ ಮಾರ್ಗವಾಗಿದೆ.
ಅಂತರರಾಷ್ಟ್ರೀಯ ಖಗೋಳವಿಜ್ಞಾನ ದಿನವನ್ನು ಹೇಗೆ ಆಚರಿಸುವುದು
ಖಗೋಳವಿಜ್ಞಾನ ದಿನವನ್ನು ಆಚರಿಸಲು ಹಲವು ಮಾರ್ಗಗಳಿವೆ, ಮತ್ತು ಪ್ರತಿ ಕುಟುಂಬ ಮತ್ತು ವ್ಯಕ್ತಿಯು ದೈನಂದಿನ ಜೀವನವನ್ನು ಬದಿಗಿಟ್ಟು ಸ್ವಲ್ಪ ಸಮಯವನ್ನು ನಭಕ್ಕೆ(ಆಕಾಶ) ನೀಡುವುದು ಮತ್ತು ನಮಗೆ ಇನ್ನೂ ಅರ್ಥವಾಗದ ರಹಸ್ಯಗಳ ಬಗ್ಗೆ ತಿಳಿಯಲು ಪ್ರಯತ್ನ ಪಡುವುದು.
ಎಲ್ಲಾ ವಯಸ್ಸಿನ ಮಕ್ಕಳೊಂದಿಗೆ ಬೆರೆತು ಅನೇಕ ಚಟುವಟಿಕೆಗಳನ್ನು ಮಾಡಿ, ಜೊತೆಗೆ ನಾವು ದೂರದರ್ಶಕವನ್ನು ಬಳಸಿ ಆಕಾಶ ನೋಡಿ ಸಂಭ್ರಮಿಸಿ ನಾವು ತಿಳಿದು ಮಕ್ಕಳಿಗೂ ತಿಳಿಸಿ ಈ ದಿನವನ್ನು ಯಶಸ್ವಿ ಮಾಡಬಹುದು. ಮನೆಯಲ್ಲೇ ವ್ಯವಸ್ಥೆ ಇರುವವರು ಮನೆಯಲ್ಲೇ ಮಾಡಬಹುದು, ಆದರೆ ಇನ್ನೂ ಪೂರ್ಣ ಅನುಭವವನ್ನು ಪಡೆಯಲು ವಸ್ತುಸಂಗ್ರಹಾಲಯ ಅಥವಾ ತಾರಾಲಯಕ್ಕೆ ಭೇಟಿ ನೀಡುವುದು ಸಹ ಖುಷಿಯಾಗುತ್ತದೆ.
No comments:
Post a Comment