Jun 1, 2021

GLOBAL DAY OF PARENTS| ಜಾಗತಿಕ ಪಾಲಕರ ದಿನ|1 JUNE 2021|

Posted by ANIL KNOWN on Jun 1, 2021

 "ಪ್ರಪಂಚದಾದ್ಯಂತ ಎಲ್ಲ ಪೋಷಕರನ್ನು ಶ್ಲಾಘಿಸಿ"  ಆಹಾ! ಎಂತಹ ವಾಕ್ಯ!! ಅಂತರಾಷ್ಟ್ರೀಯ ಸಂಯುಕ್ತ ರಾಷ್ಟ್ರಗಳ ಸಮುದಾಯ ಕಚೇರಿಯು(UN) ಈ ವಾಕ್ಯವನ್ನು ಈ ದಿನ ಹೇಳಿದೆ. ಅದಕ್ಕೆ ಕಾರಣವೂ ಇದೆ, ಈ ದಿನ ಜಾಗತಿಕವಾಗಿ ಪಾಲಕರ ದಿನವಾಗಿ ಗುರುತಿಸಲಾಗಿದೆ. ನಮ್ಮೆಲ್ಲರ ಮೂಲ ಸಮುದಾಯವಾಗಿರುವ ನಮ್ಮ ಪಾಲಕರಿಗೆ ನಾವು ನಮನ ಸಲ್ಲಿಸುವ ದಿನವಾಗಿ ಇದನ್ನು ನೆರವೇರಿಸಿ ಎನ್ನುವುದು ಈ ದಿನದ ಸಾರ.




1980 ರ ದಶಕದಿಂದಲೂ, ಕುಟುಂಬದ ಪ್ರಮುಖ ಪಾತ್ರವು ಅಂತರರಾಷ್ಟ್ರೀಯ ರಾಷ್ಟ್ರಗಳ(UN) ಸಮುದಾಯದ ಗಮನದಲ್ಲಿ ಇತ್ತು. ಆ ವರ್ಷದ ಸಾಮಾನ್ಯ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಅಂಗೀಕರಿಸಿತು. ಆ ವರ್ಷ "ಅಂತರರಾಷ್ಟ್ರೀಯ ಕುಟುಂಬ ವರ್ಷ" ಎಂತಲೂ ಮತ್ತು 15ನೇ ಮೇ ದಿನವನ್ನು "ಅಂತರರಾಷ್ಟ್ರೀಯ  ಕುಟುಂಬಗಳ ದಿನ"ಎಂತಲೂ ಘೋಷಿಸಿತು.

ಅಂತಾರಾಷ್ಟ್ರೀಯ ಕುಟುಂಬ ದಿನ ಮಾಹಿತಿಗಾಗಿ,

👇

 ಇಲ್ಲಿ click ಮಾಡಿ.

ಮಕ್ಕಳ ಪಾಲನೆಯಲ್ಲಿ ಪೋಷಕರ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುತ್ತಾ, ಮಕ್ಕಳ ಪೋಷಣೆ ಮತ್ತು ರಕ್ಷಣೆಯ ಪ್ರಾಥಮಿಕ ಜವಾಬ್ದಾರಿ ಕುಟುಂಬಕ್ಕೆ ಇದೆ ಎಂದು "ಪೋಷಕರ ಜಾಗತಿಕ ದಿನ" ಗುರುತಿಸುತ್ತದೆ.  ಅವರ ವ್ಯಕ್ತಿತ್ವದ ಪೂರ್ಣ ಮತ್ತು ಸಾಮರಸ್ಯದ ಬೆಳವಣಿಗೆಗಾಗಿ, ಮಕ್ಕಳು ಕುಟುಂಬ ಪರಿಸರದಲ್ಲಿ ಸಂತೋಷ, ಪ್ರೀತಿ ಮತ್ತು ತಿಳುವಳಿಕೆಯ ವಾತಾವರಣದಲ್ಲಿ ಬೆಳೆಯಬೇಕು.

ಪೋಷಕರ ಜಾಗತಿಕ ದಿನವು 2012 ರ ಸಾಮಾನ್ಯ ಸಭೆಯಿಂದ ಗೊತ್ತುಪಡಿಸಿದ್ದಾಗಿದೆ. ಎಲ್ಲಾ ಪೋಷಕರ ಮಕ್ಕಳ ಬಗೆಗಿನ ನಿಸ್ವಾರ್ಥ ಬದ್ಧತೆ ಮತ್ತು ಈ ಸಂಬಂಧವನ್ನು ಬೆಳೆಸುವಲ್ಲಿ ಅವರ ಜೀವಮಾನದ ತ್ಯಾಗವನ್ನು ಪ್ರಶಂಸಿಸಲು ಒಂದು ಅವಕಾಶವನ್ನು ಒದಗಿಸುತ್ತದೆ.

ಹಿನ್ನೆಲೆ

1980 ರ ದಶಕದಲ್ಲಿ, ವಿಶ್ವಸಂಸ್ಥೆಯು ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಮನ ಹರಿಸಲು ಪ್ರಾರಂಭಿಸಿತು. 1983 ರಲ್ಲಿ, ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಶಿಫಾರಸುಗಳ ಆಧಾರದ ಮೇಲೆ, ಅಭಿವೃದ್ಧಿ ಪ್ರಕ್ರಿಯೆಯಲ್ಲಿ (1983/23) ಕುಟುಂಬದ ಪಾತ್ರದ ಕುರಿತಾದ ನಿರ್ಣಯದಲ್ಲಿ ಸಾಮಾಜಿಕ ಅಭಿವೃದ್ಧಿ ಆಯೋಗವು ಕುಟುಂಬದ ಸಮಸ್ಯೆಗಳು ಮತ್ತು ಅಗತ್ಯಗಳ ಜಾಗೃತಿ ಮೂಡಿಸಲು ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಿತು.  ಹಾಗೆಯೇ ಆ ಅಗತ್ಯಗಳನ್ನು ಪೂರೈಸುವ ಪರಿಣಾಮಕಾರಿ ಮಾರ್ಗಗಳನ್ನು ಕಂಡು ಹಿಡಿಯಬೇಕು ಆ ಮಾರ್ಗವನ್ನು ಅನುಸರಿಸುವಂತೆ ಮಾಡಬೇಕು ಎಂದು ಹೇಳಿತು.

  • 9 ಡಿಸೆಂಬರ್ 1989 ರ 44/82 ರ ನಿರ್ಣಯದಲ್ಲಿ, ಜನರಲ್ ಅಸೆಂಬ್ಲಿ 1994 ಅನ್ನು ಅಂತರರಾಷ್ಟ್ರೀಯ ಕುಟುಂಬದ ವರ್ಷವೆಂದು ಘೋಷಿಸಿತು.


  • 1993ರ  47/237ರ ನಿರ್ಣಯದ ಪ್ರಕಾರ, ಪ್ರತೀ ವರ್ಷ ಮೇ 15 ರಂದು ಕುಟುಂಬಗಳ ಅಂತರರಾಷ್ಟ್ರೀಯ ದಿನವಾಗಿ ಆಚರಿಸಬೇಕೆಂದು ಸಾಮಾನ್ಯ ಸಭೆ ನಿರ್ಧರಿಸಿತು.


  • ಹಾಗೆಯೇ 2012 ರಲ್ಲಿ ಸಾಮಾನ್ಯ ಸಭೆಯು ಜೂನ್ 1 ರಂದು  ಪೋಷಕರ ಜಾಗತಿಕ ದಿನವೆಂದು ಘೋಷಿಸಿತು. ಇದನ್ನು ವಿಶ್ವದಾದ್ಯಂತ ಪೋಷಕರ ಗೌರವಾರ್ಥವಾಗಿ ವಾರ್ಷಿಕವಾಗಿ ಆಚರಿಸಲಾಗುತ್ತದೆ.


COVID-19 ಮುಷ್ಠಿಯಲ್ಲಿರುವ ಈ ಸಮಯದಲ್ಲಿ ಕೆಲಸ ಮಾಡುವ ಪೋಷಕರಿಗೆ ಹೆಚ್ಚಿನ ಬೆಂಬಲ ಬೇಕಾಗುತ್ತದೆ

  • COVID-19 ಸಾಂಕ್ರಾಮಿಕ ರೋಗವನ್ನು ಕುಟುಂಬಗಳು ಭರಿಸುತ್ತಿವೆ.  ಕುಟುಂಬದ ನಿರೂಪಕರಾಗಿ, ನಮ್ಮ ಸಮುದಾಯವಾಗಿ ಮತ್ತು ಸಮಾಜಗಳ ಅಡಿಪಾಯವಾಗಿ ಪೋಷಕರು ತಮ್ಮ ಕುಟುಂಬಗಳಿಗೆ ಹಾನಿಯಾಗದಂತೆ ಆಶ್ರಯಿಸುತ್ತಿದ್ದಾರೆ.
  • ಶಾಲೆ ಇಲ್ಲದೆ ಕುಳಿತಿರುವ ಮಕ್ಕಳನ್ನು ನೋಡಿಕೊಳ್ಳುವುದು ಮತ್ತು ಅದೇ ಸಮಯದಲ್ಲಿ ತಮ್ಮ ಕೆಲಸದ ಜವಾಬ್ದಾರಿಗಳನ್ನು ಮುಂದುವರಿಸುವುದು ಹೀಗೆ ಪೋಷಕರ ಮೇಲೆ ಒತ್ತಡವಿದೆ.
  • ಕೆಲವು ಕಡೆ ಪೋಷಕರ ಬೆಂಬಲವಿಲ್ಲದೆ, ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಭಾವನಾತ್ಮಕ ಯೋಗಕ್ಷೇಮ ಅಪಾಯದಲ್ಲಿದೆ. 
  • ಕುಟುಂಬ-ಸ್ನೇಹಿ ನೀತಿಗಳು ಮತ್ತು ಅಭ್ಯಾಸಗಳನ್ನು ಪರಿಚಯಿಸುವ ಮೂಲಕ, ಕಂಪನಿಗಳು ಮತ್ತು ಸಂಸ್ಥೆಗಳು ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಮತ್ತು ಉದ್ಯೋಗಿಗಳಿಗೆ ವ್ಯವಸ್ಥಿತ ಬೆಂಬಲವನ್ನು ನೀಡಲು ವಿಶ್ವ ಸಂಯುಕ್ತ ರಾಷ್ಟ್ರಗಳ ಕಾರ್ಯಾಲಯವು ಸೂಕ್ತ ಮಾರ್ಗದರ್ಶನ ನೀಡಬೇಕಾಗಿದೆ. ಆಗ ಮಾತ್ರ ಕುಟುಂಬಗಳು ಉತ್ತಮ ಸ್ಥಾನದಲ್ಲಿರುತ್ತವೆ.

COVID-19 ಸಾಂಕ್ರಾಮಿಕವು ವೇಗವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕುಟುಂಬ ಸ್ನೇಹಿ ನೀತಿಗಳು ಮತ್ತು ಇತರ ಉತ್ತಮ ಕೆಲಸದ ಅಭ್ಯಾಸಗಳ ಕುರಿತು ಯುನಿಸೆಫ್, ಐಎಲ್ಒ ಮತ್ತು ಯುಎನ್ ಮಹಿಳಾ ಸಂಸ್ಥೆಗಳು ಹಲವಾರು ಟಿಪ್ಪಣಿ ನೀಡಿವೆ.

"ಕುಟುಂಬದಲ್ಲಿ ಋಣಾತ್ಮಕತೆಯನ್ನು ಕಡಿಮೆ ಮಾಡಲು ದುಡಿಯುವ ಕುಟುಂಬಗಳನ್ನು ಬೆಂಬಲಿಸುವುದು ಅತ್ಯಗತ್ಯ ಎಂದು ಹೇಳುತ್ತಿವೆ."

ಇಡೀ ಜಗವೇ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ತತ್ತರಿಸಿ ಹೋಗಿದ್ದರೂ, ನಮ್ಮ ಕುಟುಂಬ ನಮ್ಮ ಕಾವಲಿಗೆ ನಿಂತಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಪೋಷಕರು ಅವರಿಗೆ ಕೋಟಿ ಪ್ರಣಾಮಗಳನ್ನು ತಿಳಿಸಿ ಈ ದಿನವನ್ನು ಒಂದು ಅವಿಸ್ಮರಣೀಯ ನೆನಪಾಗಿ ಉಳಿಸಬೇಕಾಗಿದೆ.

Previous
« Prev Post

No comments:

Post a Comment