ಈ ಬರಹದಲ್ಲಿ ಕರ್ನಾಟಕವನ್ನು ಆಳಿದ ಪ್ರಸಿದ್ಧ ರಾಜಮನೆತನಗಳ ಬಗ್ಗೆ ಕಾಲಾನುಕ್ರಮದಲ್ಲಿ ಸಂಕ್ಷಿಪ್ತವಾಗಿ ತಿಳಿಯೋಣ.
1. ಶಾತವಾಹನರು
(ಕ್ರಿ.ಪೂ. 230 - ಕ್ರಿ.ಶ. 225)
ಈ ವಂಶದ ಸ್ಥಾಪಕ
ಸಿಮುಕ, ದಕ್ಷಿಣ ಭಾರತದ ಇತಿಹಾಸದಲ್ಲಿ
ಪ್ರಥಮ ಬಾರಿಗೆ ರಾಜ್ಯವನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶಾತವಾಹನ ವಂಶದ ಇತರ
ಅರಸು ಗೌತಮೀ ಪುತ್ರ ಶಾತಕರ್ಣಿ, ಈತನಿಗೆ ''
ತ್ರೈ ಸಮುದ್ರ ತೋಯ ಪಿತವಾಹನ'' ಎಂಬ ಬಿರುದಿತ್ತು. ಇವರ ಕಾಲದಲ್ಲಿ ಅಜಂತ ಮತ್ತು ಗುಹಾಂತರ ದೇವಾಲಯಗಳು
ಪ್ರಾರಂಭವಾದವು, ತಾಳಗುಂದದ ಏಕಮಂಟಪ
ಶಿವದೇವಾಲಯ ಭಾರತದ ಪ್ರಪ್ರಥಮ ದೇವಾಲಯವೆಂದು ಪ್ರಸಿದ್ಧವಾಯಿತು.
2. ಕದಂಬರು (ಕ್ರಿ.ಶ. 345
- 540)
ಶಾತವಾಹನರ ನಂತರ
ಕರ್ನಾಟಕವನ್ನು ಆಳಿದ ಪ್ರಮುಖ ರಾಜಮನೆತನ ಕದಂಬರು. ಈ ವಂಶದ ಸ್ಥಾಪಕ ಹಾಗೂ ಪ್ರಸಿದ್ದ ದೊರೆ “ಮಯೂರವರ್ಮ'',
ಬನವಾಸಿ ಅಥವಾ ವೈಜಯಂತಿ ಇವರ ರಾಜಧಾನಿಯಾಗಿತ್ತು. ಇವರು
ಮಯೂರವರ್ಮನ ಸಾಹಿತ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರು. ಇವರ ಕಾಲದಲ್ಲಿ
ಚೀನಾ ದೇಶದ ಪ್ರಸಿದ್ಧ ಯಾತ್ರಿಕ 'ಹ್ಯುಯೆನ್ ತ್ಸ್ಯಾಂಗ್' ನು ಭೇಟಿ ನೀಡಿದ್ದನು. ತನ್ನ 'ಸಿಮೂಕ ' ಎಂಬ ಗ್ರಂಥದಲ್ಲಿ ಬನವಾಸಿಯಲ್ಲಿದ್ದ ತೆಪ್ಪವಿಹಾರಗಳು,
ಸ್ತೂಪಗಳು, ದೇವಾಲಯಗಳ ವಿವರಣೆಯಿದೆ. ಕದಂಬರ ಕಾಲದಲ್ಲಿ ಹಲಸಿಯ ಕಲ್ಲೇಶ್ವರ,
ಸುವರ್ಣೆಶ್ವರ, ಮಧ್ಯಕೇಶ್ವರ ದೇವಾಲಯ ಹಾಗೂ ಗೋವಾದ ಕಮಲ ನಾರಾಯಣ ದೇವಾಲಯಗಳು
ನಿರ್ಮಾಣಗೊಂಡವು, ಪ್ರಮುಖ ಅರಸರು -
ಕಾಕುತ್ಸ್ಯವರ್ಮ, ಶಾಂತಿವರ್ಮ,
ಮೃಗೇಶವರ್ಮ,
3. ತಲಕಾಡಿನ ಗಂಗರು
(ಕ್ರಿ.ಶ. 350 - 1000)
ರಾಜಧಾನಿ : ಕೋಲಾರ,
ತಲಕಾಡು, ಮನ್ನೆ
ಲಾಂಛನ : ಮದಗಜ
ಗಂಗವಂಶದ ಮೂಲಪುರುಷ
'ದಡಿಗ', ಈತನಿಗೆ 'ಧರ್ಮಮಹಾರಾಜ' ಎಂಬ ಬಿರುದಿತ್ತು.
ಈ ವಂಶವನ್ನು ಆಳಿದ ಇತರ ಪ್ರಮುಖ ಅರಸರು ಒಂದನೆಯ ಮಾಧವ, ಹರಿವರ್ಮ, ದುರ್ವಿನೀತ,
ಒಂದನೇ ಶಿವಮಾರ, ಶ್ರೀಪುರುಷ, ಎರಡನೇ ರಾಚಮಲ್ಲ
ನಾಲ್ಕನೇ ರಾಜಮಲ್ಲ, ಮಂತ್ರಿ ಚಾವುಂಡರಾಯ.
ಚಾವುಂಡರಾಯ:- ಈತನು
ಗಂಗರ ಆಸ್ಥಾನದ ಮಂತ್ರಿಯೂ, ದಂಡನಾಯಕನೂ ಆಗಿದ್ದನು. ಈತನಿಗೆ 'ಸತ್ಯ ಯುಧಿಷ್ಠಿರ' ಎಂಬ ಬಿರುದಿತ್ತು. ಸ್ವತಃ ವಿದ್ವಾಂಸನಾದ ಚಾವುಂಡರಾಯನು 'ಚಾವುಂಡ ಪುರಾಣ' ಎಂಬ ಗ್ರಂಥವನ್ನು ರಚಿಸಿದ್ದಾನೆ. ಅಲ್ಲದೆ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಬೆಟ್ಟದ ಮೇಲೆ
ಬಾಹುಬಲಿಯ (ಗೊಮ್ಮಟೇಶ್ವರ) ವಿಗ್ರಹವನ್ನು ನಿರ್ಮಿಸಿದನು.
ಗಂಗರ ಕಾಲದಲ್ಲಿ
ಅನೇಕ ಕೃತಿಗಳು ರಚಿಸಲ್ಪಟ್ಟಿವೆ. ನಾಲ್ಕನೇ ರಾಚಮಲ್ಲನ ಕಾಲಕ್ಕೆ ಗಂಗ ಮನೆತನ ಅವನತಿಗೊಂಡಿತು.
4. ಬಾದಾಮಿಯ
ಚಾಲುಕ್ಯರು (ಕ್ರಿ.ಶ. 500 - 557)
ರಾಜಧಾನಿ: ಬಾದಾಮಿ,
ವಾರಣಾಸಿ
ಲಾಂಛನ: ವರಾಹ
ಚಾಲುಕ್ಯ ವಂಶದ
ಸ್ಥಾಪಕ ಒಂದನೆಯ ಜಯಸಿಂಹ. ಈತನ ಮಗ ರಣರಾಗ. ರಣರಾಗನ ಮಗ -
ಪುಲಿಕೇಶಿ ಈತನಿಗೆ 'ಸತ್ಯಾಶ್ರಯ',
'ರಣ ವಿಕ್ರಮ', 'ಶ್ರೀ ಪೃಥ್ವಿವಲ್ಲಭ' ಎಂಬ ಬಿರುದುಗಳಿದ್ದವು. ಪುಲಿಕೇಶಿಯ ಮೂವರು ಮಕ್ಕಳು - ಇಮ್ಮಡಿ
ಪುಲಿಕೇಶಿ, ವಿಷ್ಣುವರ್ಧನ
ಮತ್ತು ಜಯಸಿಂಹ.
ಇಮ್ಮಡಿ ಪುಲಿಕೇಶಿ:-
ಚಾಲುಕ್ಯರಲ್ಲಿ ಸಮರ್ಥ ಹಾಗೂ ಪ್ರಸಿದ್ಧದೊರೆ ಎಂಬ ಹೆಗ್ಗಳಿಕೆ ಪಡೆದಿದ್ದನು. ಹರ್ಷವರ್ಧನನನ್ನು
ಸೋಲಿಸಿ ‘ದಕ್ಷಿಣಾ ಪಥೇಶ್ವರ' ಎಂಬ ಬಿರುದನ್ನು
ಪಡೆದಿದ್ದನು. ಈತನ ಕಾಲದಲ್ಲಿ ಪರ್ಶಿಯಾದ ದೊರೆ ಎರಡನೇ ‘ಖುಸ್ರು' ಚಾಲುಕ್ಯರ ರಾಯಭಾರಿಯನ್ನು ಬರಮಾಡಿಕೊಂಡಿದ್ದನು.
ಚಾಲುಕ್ಯರು ಧರ್ಮಪಾಲಕರಾಗಿದ್ದರು. ಇವರು ಅನೇಕ ದೇವಾಲಯಗಳನ್ನು ಕಟ್ಟಿಸಿದ್ದಾರೆ. ಇವರ ಕಾಲದಲ್ಲಿ
ಮೂರು ಶೈಲಿಯ ದೇವಾಲಯಗಳು ನಿರ್ಮಾಣಗೊಂಡದ್ದು,
(1) ನಾಗರ ಶೈಲಿ (2) ವೇಸರ ಶೈಲಿ (3) ದ್ರಾವಿಡ ಶೈಲಿ
ದೇವಾಲಯಗಳು:
ದುರ್ಗಾ, ಪಟ್ಟದ ಕಲ್ಲು, ಐಹೊಳೆ, ಬಾದಾಮಿ ಗುಹೆಗಳು, ವಿರೂಪಾಕ್ಷ ದೇವಾಲಯ,
ಗಳಗನಾಥ ದೇವಾಲಯ, ಐಹೊಳೆ - ಮಲ್ಲಿಕಾರ್ಜುನ ದೇವಾಲಯ.
ಕೊನೆಯ ಅರಸ
ಕೀರ್ತಿವರ್ಮನ ಕಾಲದಲ್ಲಿ ಚಾಲುಕ್ಯರ ಆಳ್ವಿಕೆ ಅವನತಿ ಕಂಡಿತು.
5. ರಾಷ್ಟ್ರಕೂಟರು
(ಕ್ರಿ.ಶ. 737-973)
ರಾಷ್ಟ್ರಕೂಟ
ರಾಜ್ಯಸ್ಥಾಪಕ ದಂತಿದುರ್ಗ. ಅನಂತರ ಆಳ್ವಿಕೆ
ನಡೆಸಿದ ಪ್ರಮುಖ ಅರಸರು - ಒಂದನೇ ಕೃಷ್ಣ. ಈತನಿಗೆ 'ಶುಭತುಂಗ', 'ಅಕಾಲವರ್ಷ'
ಎಂಬ ಬಿರುದಿತ್ತು. ಈತನು ಎಲ್ಲೋರದಲ್ಲಿ ಕೈಲಾಸ
ದೇವಾಲಯವನ್ನು ಕಟ್ಟಿಸಿದನು. ಅನಂತರ ಎರಡನೆ ಗೋವಿಂದ, ಧ್ರುವ, ಮೂರನೇ ಗೋವಿಂದ
ಆಳ್ವಿಕೆ ನಡೆಸಿದರು.
ಅಮೋಘ ವರ್ಷ: ಈತನು 14 ವರ್ಷದಲ್ಲೇ ಪಟ್ಟಕ್ಕೇರಿದನು. ಈತನ ಮೊದಲ ಹೆಸರು ಶರ್ವ
ಮತ್ತು ಶ್ರೀವಿಜಯ, ಅಮೋಘವರ್ಷನಿಗೆ 'ವೀರನಾರಾಯಣ' ಎಂಬ ಬಿರುದಿತ್ತು. ಈತನು ಸ್ವತಃ ಕವಿಯಾಗಿದ್ದನು. (ನೃಪತುಂಬ,
ಅತಿಶಯ ಧವಳ, ದಟ್ಟ ಮಾರ್ತಾಂಡ). ಕನ್ನಡದ ಮೊದಲ ಕೃತಿ 'ಕವಿರಾಜಮಾರ್ಗ'ವನ್ನು
ರಚಿಸಿದ್ದಾನೆ ಎಂದು ಕೆಲವು ಇತಿಹಾಸಕಾರರು ಹೇಳಿದ್ದರು. ಆದರೆ ನಂತರದಲ್ಲಿ ಅಮೋಘವರ್ಷ ಮತ್ತು ಶ್ರೀವಿಜಯ ಇಬ್ಬರು ಬೇರೆ ಹಾಗೂ ಕವಿರಾಜಮಾರ್ಗವನ್ನು
ಶ್ರೀವಿಜಯ ರಚಿಸಿದ್ದಾನೆ ಎಂದು ತಿಳಿಯಿತು. ಅಮೋಘವರ್ಷನ ಕಾಲದಲ್ಲಿ ಅರಬ್ ಪ್ರವಾಸಿ ‘ಸುಲೇಮಾನ್’
ಭಾರತಕ್ಕೆ ಭೇಟಿ ನೀಡಿದ್ದನು. ರಾಷ್ಟ್ರಕೂಟರ ಕೊನೆಯ ಅರಸ ಎರಡನೆಯ ಕರ್ಕ.
ರಾಷ್ಟ್ರಕೂಟರು
ವಾಸ್ತುಶಿಲ್ಪಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಅನೇಕ ದೇವಾಲಯಗಳನ್ನು ಕಟ್ಟಿಸಿದ್ದಾರೆ. ಕೈಲಾಸ
ದೇವಾಲಯ 164 ಅಡಿ ಉದ್ದವಿದೆ.
ಇದನ್ನು ‘ವಿಶ್ವಕರ್ಮ ಆಚಾರಿ' ಎಂಬ ಶಿಲ್ಪಿ
ಕೆತ್ತಿದ್ದಾನೆ. ಲಕ್ಷ್ಮೆಶ್ವರ, ಬಾಳೇಶ್ವರ,
ಕುಮಾರಸ್ವಾಮಿ ದೇವಾಲಯ, ಎಲಿಫೆಂಟಾ, ಪಟ್ಟದಕಲ್ಲು,
ಐಹೊಳೆ, ಕೊಣ್ಣೂರು ಇತ್ಯಾದಿಗಳು ಇವರ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿವೆ.. ರಾಷ್ಟ್ರಕೂಟರ
ಕಾಲದಲ್ಲಿ ಅನೇಕ ಕವಿಗಳು ಆಶ್ರಯವನ್ನು ಪಡೆದಿದ್ದರು.
6. ಕಲ್ಯಾಣದ
ಚಾಲುಕ್ಯರು : (ಕ್ರಿ.ಶ. 973 - 1189)
ಲಾಂಛನ: ವರಾಹ
ಚಾಲುಕ್ಯ ರಾಜ್ಯ
ಸ್ಥಾಪಕ ತೈಲಪ. ಇತರ ಪ್ರಮುಖ ಅರಸರು ಎರಡನೇ ಸೋಮೇಶ್ವರ ಮತ್ತು ಆರನೇ ವಿಕ್ರಮಾದಿತ್ಯ.
ಆರನೇ
ವಿಕ್ರಮಾದಿತ್ಯ : ಈತನು ಕ್ರಿಶ. 1076 ರಲ್ಲಿ ಪಟ್ಟಕ್ಕೆ
ಬಂದನು. ಈತನಿಗೆ 'ತ್ರಿಭುವನ ಮಲ್ಲ',
'ಪೆರ್ಮಾಡಿದೇವ' ಎಂಬ ಬಿರುದಿತ್ತು. ವಿಕ್ರಮಾದಿತ್ಯನು ಅನೇಕ
ದಿಗ್ವಿಜಯಗಳನ್ನು ಸಾಧಿಸಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಅನೇಕ ಕವಿಗಳಿಗೆ
ಆಶ್ರಯವನ್ನು ನೀಡಿದ್ದನು.
ಚಾಲುಕ್ಯರು ಕಲೆ,
ವಾಸ್ತುಶಿಲ್ಪ, ಸಂಗೀತ ಮತ್ತು ನೃತ್ಯಕ್ಕೆ ಹೆಚ್ಚಿನ ಪ್ರಾಶಸ್ತ್ರವನ್ನು ನೀಡಿದ್ದರು.
ಚಾಲುಕ್ಯರ ಕಾಲದ
ದೇವಾಲಯಗಳು: ಲಕ್ಕುಂಡಿಯ ವಿಶ್ವೇಶ್ವರ ದೇವಾಲಯ, ಇಟಗಿಯ ಮಹಾದೇವ
ದೇವಾಲಯ, ಕುರುವತ್ತಿಯ ಮಲ್ಲಿಕಾರ್ಜುನ
ದೇವಾಲಯ, ಶ್ರೀಕುಂಬೇಶ್ವರ ಮತ್ತು
ಕಲ್ಲೇಶ್ವರ ದೇವಾಲಯ.
ಕೊನೆಯ ಅರಸರು :
ಮೂರನೆಯ ಸೋಮೇಶ್ವರ, ಈತನಿಗೆ 'ಸರ್ವಜ್ಞ ಚಕ್ರವರ್ತಿ', 'ಭೂಲೋಕಮಲ್ಲ' ಎಂಬ
ಬಿರುದುಗಳಿದ್ದವು, ಜಗದೇಕ ಮಲ್ಲ,
ಮೂರನೇ ತೈಲಪ, 4 ನೇ ಸೋಮೇಶ್ವರ.
4 ನೇ ಸೋಮೇಶ್ವರನ
ಕಾಲದಲ್ಲಿ ಕಲ್ಯಾಣದ ಚಾಲುಕ್ಯ ಮನೆತನ ಅವನತಿ ಕಂಡಿತು.
7. ದೇವಗಿರಿಯ ಸೇವುಣರು
(ಯಾದವರು) : (ಕ್ರಿ.ಶ. 935 - 1334)
ರಾಜಧಾನಿ :
ದೇವಗಿರಿ
ಮೂಲ ಪುರುಷ -
ಸೇವುಣ ಚಂದ್ರ.
ಕೊನೆಯ ಅರಸ -
ಮೂರನೆಯ ಸಿಂಘಣ.
No comments:
Post a Comment