Jun 17, 2022

Glimpse of Karnataka History - Royal Dynasties PART - 2

Glimpse of Karnataka History - Royal Dynasties PART - 2

 


ಈ ಹಿಂದಿನ ಬರಹದ ಮುಂದುವರೆದ ಭಾಗ ಇದಾಗಿದೆ. ಮೊದಲ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ.

 

8. ಹೊಯ್ಸಳರು : (ಕ್ರಿ.ಶ. 1006 – 1336)

ರಾಜಧಾನಿ: ದ್ವಾರಸಮುದ್ರ,

ಲಾಂಛನ: ಹುಲಿಯನ್ನು ಸಂಹರಿಸುತ್ತಿರುವ ಸಳನ ಚಿತ್ರ

ಚಾಲುಕ್ಯರ ಪತನದ ನಂತರ ಕರ್ನಾಟಕದಲ್ಲಿ ತಲೆ ಎತ್ತಿದವರು ಹೊಯ್ಸಳರು. ಈ ವಂಶದ ಸ್ಥಾಪಕ - ಸಳ. ಈತನಿಗೆ ನೃಪಕಾಮ ಎಂಬ ಹೆಸರಿತ್ತು. ನೃಪ ಎಂದರೆ ದೊರೆ ಎಂದರ್ಥ. ಈತನಿಗೆ ಮಲೆಪರೊಳ್ ಗಂಡ ಎಂಬ ಬಿರುದಿತ್ತು.

ಇತರ ಅರಸರು : ವಿನಯಾದಿತ್ಯ, ಎರೆಯಂಗ. ಈತನಿಗೆ ಮೂರು ಮಕ್ಕಳು - ಒಂದನೇ ಬಲ್ಲಾಳ, ವಿಷ್ಣುವರ್ಧನ, ಉದಯಾದಿತ್ಯ.

ಹೊಯ್ಸಳ ವಂಶದ ಪ್ರಸಿದ್ಧದೊರೆ ವಿಷ್ಣುವರ್ಧನ (ಕ್ರಿ.ಶ. 1108-52)

ಈತನ ಮತ್ತೊಂದು ಹೆಸರು ಬಿಟ್ಟಿದೇವ’. ವಿಷ್ಣುವರ್ಧನನಿಗೆ 'ತಲಕಾಡುಗೊಂಡ', 'ಮಹಾಮಂಡಲೇಶ್ವರ', 'ಕಂಚಿಗೊಂಡ' ಮುಂತಾದ ಬಿರುದುಗಳಿದ್ದವು. ಈತನ ಕಾಲದಲ್ಲಿ ಅನೇಕ ದೇವಾಲಯಗಳು ನಿರ್ಮಾಣಗೊಂಡವು, ಕೀರ್ತಿನಾರಾಯಣ ದೇವಾಲಯ, ಬೇಲೂರಿನಲ್ಲಿ ಚೆನ್ನಕೇಶ್ವರ ದೇವಾಲಯ, ಕಪ್ಪೆ ಚೆನ್ನಿಗ, ಮೇಲುಕೋಟೆಯ ಚೆಲುವ ನಾರಾಯಣ, ಹಳೇಬೀಡಿನ ಪಾರ್ಶ್ವನಾಥ ದೇವಾಲಯ, ಶ್ರವಣಬೆಳಗೊಳದ ಜಿನನಾಥ ಬಸದಿ, ವಿಷ್ಣುವರ್ಧನನ ಹಿರಿಯ ರಾಣಿ 'ಶಾಂತಲೆ' ನಾಟ್ಯರಾಣಿಯಾಗಿದ್ದಳು.

ಕೊನೆಯ ಅರಸರು: ಒಂದನೇ ನರಸಿಂಹ, ಎರಡನೇ ಬಲ್ಲಾಳ, ಎರಡನೇ ನರಸಿಂಹ, ಮೂರನೇ ನರಸಿಂಹ, ಮೂರನೇ ಬಲ್ಲಾಳ, ನಾಲ್ಕನೇ ವೀರ ಬಲ್ಲಾಳ.

ನಾಲ್ಕನೇ ವೀರ ಬಲ್ಲಾಳ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯವು ಮಲ್ಲಿಕಾಫರ್ ನ ದಾಳಿಗೆ ಸಿಕ್ಕಿ ಅವನತಿ ಕಂಡಿತು.

 ಮೊದಲ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ.

9. ವಿಜಯನಗರ ಸಾಮ್ರಾಜ್ಯ: (ಕ್ರಿ.ಶ. 1336 - 1646)

ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಭಾರತದ ಇತಿಹಾಸದಲ್ಲಿ ಚಿರಸ್ಮರಣೀಯವಾಗಿದೆ. ಕ್ರಿ.ಶ. 1336ರಲ್ಲಿ ಹಕ್ಕ - ಬುಕ್ಕ ಎಂಬ ಸಹೋದರರು ವಿದ್ಯಾರಣ್ಯ ಎಂಬ ಗುರುಗಳ ಸಹಾಯದಿಂದ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು.

ಈ ಸಾಮ್ರಾಜ್ಯವನ್ನು 4 ಮನೆತನಗಳು ಆಳಿದವು.

1.      1) ಸಂಗಮವಂಶ (ಕ್ರಿ.ಶ. 1336-1485)

ಪ್ರಥಮ ಅರಸ - ಹರಿಹರ

ಕೊನೆಯ ಅರಸ – ಪ್ರೌಢರಾಯ. ಈತನಿಗೆ 'ಗಜಬೇಂಟೆಕಾರ' ಎಂಬ ಬಿರುದಿತ್ತು. ಪರ್ಶಿಯಾದ ಅಬ್ದುಲ್ ರಜಾಕ್ ಭೇಟಿ ನೀಡಿದ್ದನು.

ಬುಕ್ಕರಾಯ - ಈತನ ಕಾಲದಲ್ಲಿ ವೆನಿಷಿಯಾದಿಂದ ನಿಕೊಲೊ ಕೊಂಟಿ ಎಂಬ ಪ್ರವಾಸಿ ಭೇಟಿ ನೀಡಿದ್ದನು.

    2) ಸಾಳ್ವವಂಶ (ಕ್ರಿ.ಶ. 1485 – 1503)

ಮೊದಲನೆಯ ಅರಸ - ನರಸಿಂಹ

ಕೊನೆಯ ಅರಸ- 2ನೇ ನರಸಿಂಹ.

3.      3)ತುಳು ವಂಶ (ಕ್ರಿ.ಶ. 1505 – 1570)

ಪ್ರಥಮ ಅರಸ - ದೀರ ನರಸಿಂಹ ಪ್ರಸಿದ್ಧ ಅರಸ

ಪ್ರಸಿದ್ಧ ಅರಸ - ಕೃಷ್ಣದೇವರಾಯ

ಕೃಷ್ಣದೇವರಾಯ:-  ಈತನ ಕಾಲವು ಸುವರ್ಣಯುಗವಾಗಿತ್ತು. ಈತನು ಅನೇಕ ಕವಿಗಳಿಗೆ ಆಶ್ರಯ ನೀಡಿದ್ದನು. 'ಅಷ್ಟದಿಗ್ಗಜ'ರೆಂಬ ಎಂಟು ಕವಿಗಳು ಈತನ ಆಸ್ಥಾನದಲ್ಲಿದ್ದರು. ಈತನು ರಾಜ್ಯವನ್ನು ವಿಸ್ತರಿಸಿ ಅನೇಕ ಮಂದಿರಗಳ ನಿರ್ಮಾಣ ಮಾಡಿಸಿದನು.

ಕೊನೆಯ ಅರಸ : ಸದಾಶಿವ

4. ಅರವೀಡು ವಂಶ (ಕ್ರಿ.ಶ. 1543 - 1646)

ಪ್ರಥಮ ಅರಸ - ತಿರುಮಲರಾಯ.

ಕೊನೆಯ ಅರಸ - ಮೂರನೇ ಶ್ರೀರಂಗ

ವಿಜಯನಗರ ಸಾಮ್ರಾಜ್ಯವು ತಾಳಿಕೋಟೆ ಯುದ್ಧ ( ರಕ್ಕಸತಂಗಡಿ) (1565) ದಲ್ಲಿ ಅವನತಿ ಕಂಡಿತು.

 ಮೊದಲ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ.

10. ಬಹುಮನಿ ಸುಲ್ತಾನರು: (ಕ್ರಿ.ಶ. 1347 - 1527)

ಈ ಸಾಮ್ರಾಜ್ಯದ ಸ್ಥಾಪಕ - ಅಲಾ-ಉದ್-ದೀನ್ ಹಸನ್ ಬಹಮನ್‌ ಷಾ.

ಇತರೆ ಅರಸರು : 1ನೇ ಮಹಮದ್ ಷಾ - ಜಾಮಿ ಮಸೀದಿಯನ್ನು ನಿರ್ಮಿಸಿದನು.

2ನೇ ಮಹಮದ್ ಷಾ - ಈತನು ನ್ಯಾಯಾಧೀಶನಾಗಿದ್ದನು.

ಫಿರೋಜ್ ಷಾ - - ಜ್ಯೋತಿರ್ವೀಕ್ಷಣಾಲಯವನ್ನು ನಿರ್ಮಿಸಿದನು.

ಅಹಮದ್ ಷಾ - ಈತನು ತಕ್ತಮಹಲ್ ನ್ನು ನಿರ್ಮಿಸಿದನು.

2ನೇ ಅಲಾ-ಉದ್ ದಿನ್, ಹುಮಾಯುನ್ ಮತ್ತು ಪ್ರಧಾನಮಂತ್ರಿ ಮಹಮದ್‌ ಗವಾನ್ - ಈತನು ಬೀದರ್‌ನಲ್ಲಿ ಮದರೇಸಾ ಕಾಲೇಜನ್ನು ಕಟ್ಟಿಸಿದನು.

ಕೊನೆಯ ಅರಸ: ಖಲೀಂಮುಲ್ಲಾ ಈತನ ಕಾಲದಲ್ಲಿ ಬಹುಮನಿ ಸಾಮ್ರಾಜ್ಯವು ಐದು ರಾಜ್ಯಗಳಾಗಿ ವಿಭಾಗಗೊಂಡವು.

1. ಬೀದರ್ - ಇಮಾದ್ ಷಾಹಿ

2. ಅಹಮದ ನಗರ - ನಿಜಾಂಶಾಹಿ

3. ಬಿಜಾಪುರ - ಆದಿಲ್‌ ಷಾಹಿ

4. ಗೋಲ್ಕೊಂಡ - ಕುತುಬ್ ಷಾಹಿ

5. ಬೀದರ್ - ಬರೀದ್ ಷಾಹಿ

 

11. ಬಿಜಾಪುರದ ಆದಿಲ್ ಷಾಹಿ : (ಕ್ರಿ.ಶ. 1489 – 1686)

ಈ ವಂಶದ ಸ್ಥಾಪಕ:-  ಯೂಸುಫ್ ಆದಿಲ್ ಷಾ

ಇತರ ಅರಸರು: ಇಸ್ಮಾಯಿಲ್‌ ಆದಿಲ್ ಷಾ, 1ನೇ ಇಬ್ರಾಹಿಂ ಆದಿಲ್ ಷಾ, 1ನೇ ಆಲಿ ಆದಿಲ್ ಷಾ, 2ನೇ ಇಬ್ರಾಹಿಂ ಆದಿಲ್ ಷಾ, ಮಹಮದ್‌ ಆದಿಲ್ ಷಾ- ಈತನು 'ಗೋಲ್ ಗುಂಬಜ್' ನಿರ್ಮಿಸಿದನು, 2ನೇ ಆದಿಲ್ ಷಾ.

ಕೊನೆಯ ಅರಸ - ಸಿಕಂದರ್ ಆದಿಲ್ ಷಾ.

 

12. ಮೈಸೂರು ಒಡೆಯರು : (ಕ್ರಿ.ಶ. 1399 - 1947)

ಪ್ರಮುಖ ಅರಸರು: ರಾಜ ಒಡೆಯರು: ಮೈಸೂರಿನಲ್ಲಿ ‘ಮಹಾನವಮಿ ಉತ್ಸವ' ಮೊದಲ ಬಾರಿಗೆ ಪ್ರಾರಂಭಿಸಿದರು.

ಚಾಮರಾಜ ಒಡೆಯರು, ಎರಡನೆಯ ರಾಜ ಒಡೆಯರು, ಕಂಠೀರವ ನರಸರಾಜ ಒಡೆಯರು - ಇವರಿಗೆ 'ರಣಧೀರ' ಎಂಬ ಬಿರುದಿತ್ತು.

ದೊಡ್ಡ ದೇವರಾಜ ಒಡೆಯರು - ಇವರಿಗೆ 'ಪರರಾಮ ಭಯಂಕರ' ಎಂಬ ಬಿರುದಿತ್ತು. ಇವರು ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹಾಕಿಸಿ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸಿದರು.

ಚಿಕ್ಕದೇವರಾಜ ಒಡೆಯ : ಒಡೆಯ ಮನೆತನದಲ್ಲಿ ಪ್ರಸಿದ್ದರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇವರ ಕಾಲದಲ್ಲಿ ಅನೇಕ ಕವಿಗಳು ಆಶ್ರಯವನ್ನು ಪಡೆದಿದ್ದರು. ಇವರಿಗೆ 'ನವಕೋಟಿ ನಾರಾಯಣ' ಎಂಬ ಬಿರುದಿತ್ತು.

2ನೇ ಕಂಠೀರವ ನರಸರಾಜ : ಇವರು ಮೂಕರಾಗಿದ್ದರು. ಇವರ ಕಾಲದಲ್ಲಿ ಮೇಲುಕೋಟೆಯ ಬಿಂದು ಮಾಧವ ದೇವಾಲಯ ನಿರ್ಮಾಣವಾಯಿತು.

ದೊಡ್ಡ ಕೃಷ್ಣರಾಜ ಒಡೆಯ, ಎರಡನೇ ಕೃಷ್ಣರಾಜ ಒಡೆಯರು- ಇವರ ಕಾಲದಲ್ಲಿ 'ಹೈದರ್ ಆಲಿ' ದಳವಾಯಿ ಹುದ್ದೆಗೆ ನೇಮಕಗೊಂಡನು. ಅನಂತರ ಈತನ ಮಗ ಟಿಪ್ಪುಸುಲ್ತಾನ್‌ ಅಧಿಕಾರಕ್ಕೆ ಬಂದನು. ಈತನಿಗೆ 'ಮೈಸೂರಿನ ಹುಲಿ' ಎಂಬ ಬಿರುದಿತ್ತು. ಕ್ರಿ.ಶ. 1799 ರಲ್ಲಿ, ಟಿಪ್ಪು ಮರಣ ಹೊಂದಿದನು.

ಮುಮ್ಮಡಿ ಕೃಷ್ಣರಾಜ ಒಡೆಯ, ಚಾಮರಾಜ ಒಡೆಯ, ನಾಲ್ವಡಿ ಕೃಷ್ಣರಾಜ ಒಡೆಯ,

ಕೊನೆಯ ಅರಸ- ಜಯಚಾಮರಾಜೇಂದ್ರ ಒಡೆಯರು.

ಕ್ರಿ.ಶ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಮೈಸೂರು ಭಾರತದ ಒಕ್ಕೂಟದಲ್ಲಿ ವಿಲೀನವಾಯಿತು.

 

ಕರ್ನಾಟಕದ ಏಕೀಕರಣ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ನಂತರ ಹರಿದು ಹಂಚಿಹೋಗಿದ್ದ ಕನ್ನಡ ಭಾಷಾ ಪ್ರದೇಶಗಳನ್ನು ಒಗ್ಗೂಡಿಸಿ, ಕರ್ನಾಟಕದ ಏಕೀಕರಣಕ್ಕಾಗಿ ಹಲವಾರು ರಾಜಕೀಯ ನಾಯಕರು, ಸಾಹಿತಿಗಳು, ಪತ್ರಕರ್ತರು ಹೋರಾಡಿದರು. ಇವರೆಲ್ಲರ ಪರಿಶ್ರಮದ ಫಲವಾಗಿ 1947ರಲ್ಲಿ ಐದು ಆಡಳಿತಗಳಿಗೆ ಅಂದರೆ ಮದ್ರಾಸ್, ಮುಂಬೈ ಪ್ರಾಂತಗಳು, ಕೊಡಗು, ಹೈದರಾಬಾದ್ ಮತ್ತು ಮೈಸೂರು ಸಂಸ್ಥಾನದಲ್ಲಿದ್ದ ಪ್ರದೇಶಗಳು ಒಳಪಟ್ಟು ಬಳಿಕ 1956 ನವೆಂಬರ್ 1 ರಂದು ಕರ್ನಾಟಕವು ಒಂದಾಯಿತು. ಆ ದಿನವನ್ನೇ ಕನ್ನಡಿಗರು ಪ್ರತೀವರ್ಷ ಕನ್ನಡ ರಾಜ್ಯೋತ್ಸವ ಎಂದು ಆಚರಿಸುತ್ತಾ ಬಂದಿದ್ದಾರೆ.

ಹೀಗೆ ಬೆಳೆದು ಬಂದ ಈ ಕನ್ನಡ ನಾಡಿಗೆ “ಕರ್ನಾಟಕ” ಎಂಬ ಹೆಸರನ್ನು 1973ರಲ್ಲಿ ಮುಖ್ಯಮಂತ್ರಿ ದೇವರಾಜ ಅರಸರ ಕಾಲದಲ್ಲಿ ನಾಮಕರಣ ಮಾಡಲಾಯಿತು.

ಹೀಗೆ ಕರ್ನಾಟಕಕ್ಕೆ ಸುಮಾರು 2000 ವರ್ಷಗಳ ಸುದೀರ್ಘವಾದ ಹಾಗೂ ಭವ್ಯವಾದ ಇತಿಹಾಸವಿದೆ. ಶಾಸ್ತ್ರಬದ್ಧ ಹಾಗೂ ವೈಜ್ಞಾನಿಕವಾಗಿ ರೂಪಿತವಾಗಿರುವ ಕನ್ನಡ ಭಾಷೆಗೆ ತನ್ನದೇ ಆದ “ಲಿಪಿ' ಇದೆ. ಕನ್ನಡದ ಕವಿರಾಜ ಮಾರ್ಗ ಕೃತಿ ರಚಿತವಾದ ಕಾಲದಲ್ಲಿ ಇಂಗ್ಲಿಷ್(ಆಂಗ್ಲಭಾಷೆ) ತೊಟ್ಟಿಲಲ್ಲಿತ್ತು. ಹಿಂದಿ ಹುಟ್ಟಿರಲೇ ಇಲ್ಲ. ಕನ್ನಡವು ಒಂದು ದ್ರಾವಿಡ ಭಾಷೆ. ಈ ಗುಂಪಿನಲ್ಲೇ ಇರುವ ಇತರ ಭಾಷೆಗಳೆಂದರೆ, ತಮಿಳು, ತೆಲುಗು, ಮಲೆಯಾಳಂ, ತುಳು, ಕೊಡಗು.....ಇತ್ಯಾದಿ.

ಹೀಗೆ ಕನ್ನಡ ಭಾಷೆಯು ಸ್ವತಂತ್ರ ಭಾಷೆಯಾಗಿ ಬೆಳೆದು ಬಂದಿದ್ದರೂ, ಸಂಸ್ಕೃತ ಭಾಷೆಯ ಪ್ರಭಾವ ಹೆಚ್ಚಾಗಿರುವುದು ಕಂಡು ಬರುತ್ತದೆ. ಅಲ್ಲದೆ ಕನ್ನಡ ಭಾಷೆಯ ಬೆಳವಣಿಗೆಯನ್ನು 3 ಭಾಗಗಳಾಗಿಸಿ ಅಧ್ಯಯನ ಮಾಡಲಾಗುತ್ತದೆ.

(1) ಹಳಗನ್ನಡ

(2) ನಡುಗನ್ನಡ

(3) ಹೊಸಗನ್ನಡ

ಮೊದಲ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ.

Jun 15, 2022

Glimpse of Karnataka History - Royal Dynasties

Glimpse of Karnataka History - Royal Dynasties

 ಈ ಬರಹದಲ್ಲಿ ಕರ್ನಾಟಕವನ್ನು ಆಳಿದ ಪ್ರಸಿದ್ಧ ರಾಜಮನೆತನಗಳ ಬಗ್ಗೆ ಕಾಲಾನುಕ್ರಮದಲ್ಲಿ ಸಂಕ್ಷಿಪ್ತವಾಗಿ ತಿಳಿಯೋಣ.

 


1. ಶಾತವಾಹನರು (ಕ್ರಿ.ಪೂ. 230 - ಕ್ರಿ.ಶ. 225)

ಈ ವಂಶದ ಸ್ಥಾಪಕ ಸಿಮುಕ, ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ರಾಜ್ಯವನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶಾತವಾಹನ ವಂಶದ ಇತರ ಅರಸು ಗೌತಮೀ ಪುತ್ರ ಶಾತಕರ್ಣಿ, ಈತನಿಗೆ '' ತ್ರೈ ಸಮುದ್ರ ತೋಯ ಪಿತವಾಹನ'' ಎಂಬ ಬಿರುದಿತ್ತು. ಇವರ ಕಾಲದಲ್ಲಿ ಅಜಂತ ಮತ್ತು ಗುಹಾಂತರ ದೇವಾಲಯಗಳು ಪ್ರಾರಂಭವಾದವು, ತಾಳಗುಂದದ ಏಕಮಂಟಪ ಶಿವದೇವಾಲಯ ಭಾರತದ ಪ್ರಪ್ರಥಮ ದೇವಾಲಯವೆಂದು ಪ್ರಸಿದ್ಧವಾಯಿತು.

 

2. ಕದಂಬರು (ಕ್ರಿ.ಶ. 345 - 540)

ಶಾತವಾಹನರ ನಂತರ ಕರ್ನಾಟಕವನ್ನು ಆಳಿದ ಪ್ರಮುಖ ರಾಜಮನೆತನ ಕದಂಬರು. ಈ ವಂಶದ ಸ್ಥಾಪಕ ಹಾಗೂ ಪ್ರಸಿದ್ದ ದೊರೆ “ಮಯೂರವರ್ಮ'', ಬನವಾಸಿ ಅಥವಾ ವೈಜಯಂತಿ ಇವರ ರಾಜಧಾನಿಯಾಗಿತ್ತು. ಇವರು ಮಯೂರವರ್ಮನ ಸಾಹಿತ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರು. ಇವರ ಕಾಲದಲ್ಲಿ ಚೀನಾ ದೇಶದ ಪ್ರಸಿದ್ಧ ಯಾತ್ರಿಕ 'ಹ್ಯುಯೆನ್ ತ್ಸ್ಯಾಂಗ್' ನು ಭೇಟಿ ನೀಡಿದ್ದನು. ತನ್ನ 'ಸಿಮೂಕ ' ಎಂಬ ಗ್ರಂಥದಲ್ಲಿ ಬನವಾಸಿಯಲ್ಲಿದ್ದ ತೆಪ್ಪವಿಹಾರಗಳು, ಸ್ತೂಪಗಳು, ದೇವಾಲಯಗಳ ವಿವರಣೆಯಿದೆ. ಕದಂಬರ ಕಾಲದಲ್ಲಿ ಹಲಸಿಯ ಕಲ್ಲೇಶ್ವರ, ಸುವರ್ಣೆಶ್ವರ, ಮಧ್ಯಕೇಶ್ವರ ದೇವಾಲಯ ಹಾಗೂ ಗೋವಾದ ಕಮಲ ನಾರಾಯಣ ದೇವಾಲಯಗಳು ನಿರ್ಮಾಣಗೊಂಡವು, ಪ್ರಮುಖ ಅರಸರು - ಕಾಕುತ್ಸ್ಯವರ್ಮ, ಶಾಂತಿವರ್ಮ, ಮೃಗೇಶವರ್ಮ,

 

3. ತಲಕಾಡಿನ ಗಂಗರು (ಕ್ರಿ.ಶ. 350 - 1000)

ರಾಜಧಾನಿ : ಕೋಲಾರ, ತಲಕಾಡು, ಮನ್ನೆ

ಲಾಂಛನ : ಮದಗಜ

ಗಂಗವಂಶದ ಮೂಲಪುರುಷ 'ದಡಿಗ', ಈತನಿಗೆ 'ಧರ್ಮಮಹಾರಾಜ' ಎಂಬ ಬಿರುದಿತ್ತು. ಈ ವಂಶವನ್ನು ಆಳಿದ ಇತರ ಪ್ರಮುಖ ಅರಸರು ಒಂದನೆಯ ಮಾಧವ, ಹರಿವರ್ಮ, ದುರ್ವಿನೀತ, ಒಂದನೇ ಶಿವಮಾರ, ಶ್ರೀಪುರುಷ, ಎರಡನೇ ರಾಚಮಲ್ಲ ನಾಲ್ಕನೇ ರಾಜಮಲ್ಲ, ಮಂತ್ರಿ ಚಾವುಂಡರಾಯ.

ಚಾವುಂಡರಾಯ:- ಈತನು ಗಂಗರ ಆಸ್ಥಾನದ ಮಂತ್ರಿಯೂ, ದಂಡನಾಯಕನೂ ಆಗಿದ್ದನು. ಈತನಿಗೆ 'ಸತ್ಯ ಯುಧಿಷ್ಠಿರ' ಎಂಬ ಬಿರುದಿತ್ತು. ಸ್ವತಃ ವಿದ್ವಾಂಸನಾದ ಚಾವುಂಡರಾಯನು 'ಚಾವುಂಡ ಪುರಾಣ' ಎಂಬ ಗ್ರಂಥವನ್ನು ರಚಿಸಿದ್ದಾನೆ. ಅಲ್ಲದೆ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಬೆಟ್ಟದ ಮೇಲೆ ಬಾಹುಬಲಿಯ (ಗೊಮ್ಮಟೇಶ್ವರ) ವಿಗ್ರಹವನ್ನು ನಿರ್ಮಿಸಿದನು.

ಗಂಗರ ಕಾಲದಲ್ಲಿ ಅನೇಕ ಕೃತಿಗಳು ರಚಿಸಲ್ಪಟ್ಟಿವೆ. ನಾಲ್ಕನೇ ರಾಚಮಲ್ಲನ ಕಾಲಕ್ಕೆ ಗಂಗ ಮನೆತನ ಅವನತಿಗೊಂಡಿತು.

 

4. ಬಾದಾಮಿಯ ಚಾಲುಕ್ಯರು (ಕ್ರಿ.ಶ. 500 - 557)

ರಾಜಧಾನಿ: ಬಾದಾಮಿ, ವಾರಣಾಸಿ

ಲಾಂಛನ: ವರಾಹ

ಚಾಲುಕ್ಯ ವಂಶದ ಸ್ಥಾಪಕ ಒಂದನೆಯ ಜಯಸಿಂಹ. ಈತನ ಮಗ ರಣರಾಗ. ರಣರಾಗನ ಮಗ - ಪುಲಿಕೇಶಿ ಈತನಿಗೆ 'ಸತ್ಯಾಶ್ರಯ', 'ರಣ ವಿಕ್ರಮ', 'ಶ್ರೀ ಪೃಥ್ವಿವಲ್ಲಭ' ಎಂಬ ಬಿರುದುಗಳಿದ್ದವು. ಪುಲಿಕೇಶಿಯ ಮೂವರು ಮಕ್ಕಳು - ಇಮ್ಮಡಿ ಪುಲಿಕೇಶಿ, ವಿಷ್ಣುವರ್ಧನ ಮತ್ತು ಜಯಸಿಂಹ.

ಇಮ್ಮಡಿ ಪುಲಿಕೇಶಿ:- ಚಾಲುಕ್ಯರಲ್ಲಿ ಸಮರ್ಥ ಹಾಗೂ ಪ್ರಸಿದ್ಧದೊರೆ ಎಂಬ ಹೆಗ್ಗಳಿಕೆ ಪಡೆದಿದ್ದನು. ಹರ್ಷವರ್ಧನನನ್ನು ಸೋಲಿಸಿ ‘ದಕ್ಷಿಣಾ ಪಥೇಶ್ವರ' ಎಂಬ ಬಿರುದನ್ನು ಪಡೆದಿದ್ದನು. ಈತನ ಕಾಲದಲ್ಲಿ ಪರ್ಶಿಯಾದ ದೊರೆ ಎರಡನೇ ‘ಖುಸ್ರು' ಚಾಲುಕ್ಯರ ರಾಯಭಾರಿಯನ್ನು ಬರಮಾಡಿಕೊಂಡಿದ್ದನು. ಚಾಲುಕ್ಯರು ಧರ್ಮಪಾಲಕರಾಗಿದ್ದರು. ಇವರು ಅನೇಕ ದೇವಾಲಯಗಳನ್ನು ಕಟ್ಟಿಸಿದ್ದಾರೆ. ಇವರ ಕಾಲದಲ್ಲಿ ಮೂರು ಶೈಲಿಯ ದೇವಾಲಯಗಳು ನಿರ್ಮಾಣಗೊಂಡದ್ದು,

(1) ನಾಗರ ಶೈಲಿ (2) ವೇಸರ ಶೈಲಿ  (3) ದ್ರಾವಿಡ ಶೈಲಿ

ದೇವಾಲಯಗಳು: ದುರ್ಗಾ, ಪಟ್ಟದ ಕಲ್ಲು, ಐಹೊಳೆ, ಬಾದಾಮಿ ಗುಹೆಗಳು, ವಿರೂಪಾಕ್ಷ ದೇವಾಲಯ, ಗಳಗನಾಥ ದೇವಾಲಯ, ಐಹೊಳೆ - ಮಲ್ಲಿಕಾರ್ಜುನ ದೇವಾಲಯ.

ಕೊನೆಯ ಅರಸ ಕೀರ್ತಿವರ್ಮನ ಕಾಲದಲ್ಲಿ ಚಾಲುಕ್ಯರ ಆಳ್ವಿಕೆ ಅವನತಿ ಕಂಡಿತು.

 

5. ರಾಷ್ಟ್ರಕೂಟರು (ಕ್ರಿ.ಶ. 737-973)

ರಾಷ್ಟ್ರಕೂಟ ರಾಜ್ಯಸ್ಥಾಪಕ ದಂತಿದುರ್ಗ. ಅನಂತರ ಆಳ್ವಿಕೆ ನಡೆಸಿದ ಪ್ರಮುಖ ಅರಸರು - ಒಂದನೇ ಕೃಷ್ಣ. ಈತನಿಗೆ 'ಶುಭತುಂಗ', 'ಅಕಾಲವರ್ಷ' ಎಂಬ ಬಿರುದಿತ್ತು. ಈತನು ಎಲ್ಲೋರದಲ್ಲಿ ಕೈಲಾಸ ದೇವಾಲಯವನ್ನು ಕಟ್ಟಿಸಿದನು. ಅನಂತರ ಎರಡನೆ ಗೋವಿಂದ, ಧ್ರುವ, ಮೂರನೇ ಗೋವಿಂದ ಆಳ್ವಿಕೆ ನಡೆಸಿದರು.

ಅಮೋಘ ವರ್ಷ: ಈತನು 14 ವರ್ಷದಲ್ಲೇ ಪಟ್ಟಕ್ಕೇರಿದನು. ಈತನ ಮೊದಲ ಹೆಸರು ಶರ್ವ ಮತ್ತು ಶ್ರೀವಿಜಯ, ಅಮೋಘವರ್ಷನಿಗೆ 'ವೀರನಾರಾಯಣ' ಎಂಬ ಬಿರುದಿತ್ತು. ಈತನು ಸ್ವತಃ ಕವಿಯಾಗಿದ್ದನು. (ನೃಪತುಂಬ, ಅತಿಶಯ ಧವಳ, ದಟ್ಟ ಮಾರ್ತಾಂಡ). ಕನ್ನಡದ ಮೊದಲ ಕೃತಿ 'ಕವಿರಾಜಮಾರ್ಗ'ವನ್ನು ರಚಿಸಿದ್ದಾನೆ ಎಂದು ಕೆಲವು ಇತಿಹಾಸಕಾರರು ಹೇಳಿದ್ದರು. ಆದರೆ ನಂತರದಲ್ಲಿ ಅಮೋಘವರ್ಷ ಮತ್ತು ಶ್ರೀವಿಜಯ ಇಬ್ಬರು ಬೇರೆ ಹಾಗೂ ಕವಿರಾಜಮಾರ್ಗವನ್ನು ಶ್ರೀವಿಜಯ ರಚಿಸಿದ್ದಾನೆ ಎಂದು ತಿಳಿಯಿತು. ಅಮೋಘವರ್ಷನ ಕಾಲದಲ್ಲಿ ಅರಬ್ ಪ್ರವಾಸಿ ‘ಸುಲೇಮಾನ್‌’ ಭಾರತಕ್ಕೆ ಭೇಟಿ ನೀಡಿದ್ದನು. ರಾಷ್ಟ್ರಕೂಟರ ಕೊನೆಯ ಅರಸ ಎರಡನೆಯ ಕರ್ಕ.

 

ರಾಷ್ಟ್ರಕೂಟರು ವಾಸ್ತುಶಿಲ್ಪಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಅನೇಕ ದೇವಾಲಯಗಳನ್ನು ಕಟ್ಟಿಸಿದ್ದಾರೆ. ಕೈಲಾಸ ದೇವಾಲಯ 164 ಅಡಿ ಉದ್ದವಿದೆ. ಇದನ್ನು ‘ವಿಶ್ವಕರ್ಮ ಆಚಾರಿ' ಎಂಬ ಶಿಲ್ಪಿ ಕೆತ್ತಿದ್ದಾನೆ. ಲಕ್ಷ್ಮೆಶ್ವರ, ಬಾಳೇಶ್ವರ, ಕುಮಾರಸ್ವಾಮಿ ದೇವಾಲಯ, ಎಲಿಫೆಂಟಾ, ಪಟ್ಟದಕಲ್ಲು, ಐಹೊಳೆ, ಕೊಣ್ಣೂರು ಇತ್ಯಾದಿಗಳು ಇವರ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿವೆ.. ರಾಷ್ಟ್ರಕೂಟರ ಕಾಲದಲ್ಲಿ ಅನೇಕ ಕವಿಗಳು ಆಶ್ರಯವನ್ನು ಪಡೆದಿದ್ದರು.

 

6. ಕಲ್ಯಾಣದ ಚಾಲುಕ್ಯರು : (ಕ್ರಿ.ಶ. 973 - 1189)

ಲಾಂಛನ: ವರಾಹ

ಚಾಲುಕ್ಯ ರಾಜ್ಯ ಸ್ಥಾಪಕ ತೈಲಪ. ಇತರ ಪ್ರಮುಖ ಅರಸರು ಎರಡನೇ ಸೋಮೇಶ್ವರ ಮತ್ತು ಆರನೇ ವಿಕ್ರಮಾದಿತ್ಯ.

ಆರನೇ ವಿಕ್ರಮಾದಿತ್ಯ : ಈತನು ಕ್ರಿಶ. 1076 ರಲ್ಲಿ ಪಟ್ಟಕ್ಕೆ ಬಂದನು. ಈತನಿಗೆ 'ತ್ರಿಭುವನ ಮಲ್ಲ', 'ಪೆರ್ಮಾಡಿದೇವ' ಎಂಬ ಬಿರುದಿತ್ತು. ವಿಕ್ರಮಾದಿತ್ಯನು ಅನೇಕ ದಿಗ್ವಿಜಯಗಳನ್ನು ಸಾಧಿಸಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಅನೇಕ ಕವಿಗಳಿಗೆ ಆಶ್ರಯವನ್ನು ನೀಡಿದ್ದನು.

ಚಾಲುಕ್ಯರು ಕಲೆ, ವಾಸ್ತುಶಿಲ್ಪ, ಸಂಗೀತ ಮತ್ತು ನೃತ್ಯಕ್ಕೆ ಹೆಚ್ಚಿನ ಪ್ರಾಶಸ್ತ್ರವನ್ನು ನೀಡಿದ್ದರು.

ಚಾಲುಕ್ಯರ ಕಾಲದ ದೇವಾಲಯಗಳು: ಲಕ್ಕುಂಡಿಯ ವಿಶ್ವೇಶ್ವರ ದೇವಾಲಯ, ಇಟಗಿಯ ಮಹಾದೇವ ದೇವಾಲಯ, ಕುರುವತ್ತಿಯ ಮಲ್ಲಿಕಾರ್ಜುನ ದೇವಾಲಯ, ಶ್ರೀಕುಂಬೇಶ್ವರ ಮತ್ತು ಕಲ್ಲೇಶ್ವರ ದೇವಾಲಯ.

ಕೊನೆಯ ಅರಸರು : ಮೂರನೆಯ ಸೋಮೇಶ್ವರ, ಈತನಿಗೆ 'ಸರ್ವಜ್ಞ ಚಕ್ರವರ್ತಿ', 'ಭೂಲೋಕಮಲ್ಲ' ಎಂಬ ಬಿರುದುಗಳಿದ್ದವು, ಜಗದೇಕ ಮಲ್ಲ, ಮೂರನೇ ತೈಲಪ, 4 ನೇ ಸೋಮೇಶ್ವರ.

 4 ನೇ ಸೋಮೇಶ್ವರನ ಕಾಲದಲ್ಲಿ ಕಲ್ಯಾಣದ ಚಾಲುಕ್ಯ ಮನೆತನ ಅವನತಿ ಕಂಡಿತು.

 

7. ದೇವಗಿರಿಯ ಸೇವುಣರು (ಯಾದವರು) : (ಕ್ರಿ.ಶ. 935 - 1334)

ರಾಜಧಾನಿ : ದೇವಗಿರಿ

ಮೂಲ ಪುರುಷ - ಸೇವುಣ ಚಂದ್ರ.

ಕೊನೆಯ ಅರಸ - ಮೂರನೆಯ ಸಿಂಘಣ.

Jun 14, 2022

The Great Personalities - Ram Mohan Roy| ಮಹಾನ್ ವ್ಯಕ್ತಿಗಳು - ರಾಮ್ ಮೋಹನ್ ರಾಯ್|

The Great Personalities - Ram Mohan Roy| ಮಹಾನ್ ವ್ಯಕ್ತಿಗಳು - ರಾಮ್ ಮೋಹನ್ ರಾಯ್|

 ರಾಮ್ ಮೋಹನ್ ರಾಯ್ ಅವರ ಹಿನ್ನಲೆ.

ರಾಜಾ ರಾಮ್ ಮೋಹನ್ ರಾಯ್ ಅವರು ಮೇ 22, 1772 ರಲ್ಲಿ ರಾಧಾನಗರ ಬಂಗಾಳದಲ್ಲಿ ಜನಿಸಿದರು.ಭಾರತೀಯ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸುಧಾರಕರಾದ ಇವರು, ಸಾಂಪ್ರದಾಯಿಕ ಹಿಂದೂ ಸಂಸ್ಕೃತಿಗೆ ಸವಾಲು ಹಾಕಿದರು ಮತ್ತು ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತೀಯ ಸಮಾಜಕ್ಕೆ ಪ್ರಗತಿಯ ರೇಖೆಗಳನ್ನು ಸೂಚಿಸಿದರು. ಇವರನ್ನು “ಆಧುನಿಕ ಭಾರತದ ಪಿತಾಮಹ” ಎಂದು ಕರೆಯಲಾಗುತ್ತದೆ.

ರಾಜಾ ರಾಮ್ ಮೋಹನ್ ರಾಯ್ ಅವರನ್ನು ಆಧುನಿಕ ಭಾರತದ ಮೊದಲ ಮಹಾನ್ ನಾಯಕ ಎಂದು ಪರಿಗಣಿಸಲಾಗಿದೆ. ಜಾಗೃತಿಯ ಕೇಂದ್ರ ವ್ಯಕ್ತಿ ಎಂದು ಕೂಡ ಕರೆಯುತ್ತಾರೆ. ರಾಮ್ ಮೋಹನ್ ರಾಯ್ ಅವರು ಸಮಕಾಲೀನ ಭಾರತೀಯ ಸಮಾಜದ ಅಸ್ಥಿರತೆ ಮತ್ತು ಭ್ರಷ್ಟಾಚಾರದಿಂದ ನೋವುಂಡವರು, ಅವರ ಸಮಯದಲ್ಲಿ ಜಾತಿ ಮತ್ತು ಸಂಪ್ರದಾಯಗಳು ಪ್ರಾಬಲ್ಯ ಹೊಂದಿದ್ದವು. ಧರ್ಮವು ಮೂಢನಂಬಿಕೆಗಳಿಂದ ತುಂಬಿತ್ತು ಮತ್ತು ಅಜ್ಞಾನಿಗಳಿಂದ ಮತ್ತು ಭ್ರಷ್ಟ ಪುರೋಹಿತರಿಂದ ಶೋಷಣೆಗೆ ಒಳಗಾಗಿತ್ತು.ಮೇಲ್ವರ್ಗದವರು ಸ್ವಾರ್ಥಿಗಳಾಗಿದ್ದರು ಮತ್ತು ತಮ್ಮ ಸಂಕುಚಿತ ಹಿತಾಸಕ್ತಿಗಳಿಗೆ ಸಾಮಾಜಿಕ ಹಿತಾಸಕ್ತಿಗಳನ್ನು ಹೆಚ್ಚಾಗಿ ಕಡೆಗಣಿಸಿದ್ದರು. ಇವರು ಸೆಪ್ಟೆಂಬರ್ 27, 1833 ರಲ್ಲಿ ಬ್ರಿಸ್ಟಲ್ (ಗ್ಲೌಸೆಸ್ಟರ್‌ಶೈರ್, ಇಂಗ್ಲೆಂಡ್) ನಲ್ಲಿ ಮರಣ ಹೊಂದಿದರು.



ಸಾಂಪ್ರದಾಯಿಕ ನಿಲುವು

ರಾಮ್ ಮೋಹನ್ ರಾಯ್ ಪೂರ್ವದಲ್ಲಿ ಸಾಂಪ್ರದಾಯಿಕ ತಾತ್ವಿಕ ವ್ಯವಸ್ಥೆಗಳ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದರು; ಆದರೆ, ಅದೇ ಸಮಯದಲ್ಲಿ, ಪಾಶ್ಚಿಮಾತ್ಯ ಸಂಸ್ಕೃತಿಯು ಭಾರತೀಯ ಸಮಾಜವನ್ನು ಪುನರುತ್ಪಾದಿಸಲು ಸಹಾಯ ಮಾಡುತ್ತದೆ ಎಂದು ಅವರು ನಂಬಿದ್ದರು. ನಿರ್ದಿಷ್ಟವಾಗಿ ಹೇಳುವುದಾದರೆ, ರಾಮ್ ಮೋಹನ್ ರಾಯ್ ಅವರು ತಮ್ಮ ದೇಶವಾಸಿಗಳು ತರ್ಕಬದ್ಧ, ವೈಜ್ಞಾನಿಕ ವಿಧಾನ, ಮಾನವ ಘನತೆ, ಪುರುಷರು ಮತ್ತು ಮಹಿಳೆಯರ ಸಾಮಾಜಿಕ ಸಮಾನತೆಯ ತತ್ವವನ್ನು ಸ್ವೀಕರಿಸಬೇಕೆಂದು ಬಯಸಿದ್ದರು. ಅವರು ದೇಶದಲ್ಲಿ ಆಧುನಿಕ ಬಂಡವಾಳಶಾಹಿ ಮತ್ತು ನೂತನ ಉದ್ಯಮಶಾಹಿ ಪರವಾಗಿಯೂ ಇದ್ದರು.

ರಾಮ್ ಮೋಹನ್ ರಾಯ್ ಅವರು ಸಂಸ್ಕೃತ, ಪರ್ಷಿಯನ್, ಅರೇಬಿಕ್, ಇಂಗ್ಲಿಷ್, ಫ್ರೆಂಚ್, ಲ್ಯಾಟಿನ್, ಗ್ರೀಕ್ ಮತ್ತು ಹೀಬ್ರೂ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಭಾಷೆಗಳನ್ನು ಕಲಿತ ವಿದ್ವಾಂಸರಾಗಿದ್ದರು. ಯುವಕನಾಗಿದ್ದಾಗ, ರಾಮ್ ಮೋಹನ್ ರಾಯ್ ಸಂಸ್ಕೃತ ಸಾಹಿತ್ಯ ಮತ್ತು ಹಿಂದೂ ತತ್ವಶಾಸ್ತ್ರವನ್ನು ವಾರಣಾಸಿ ಮತ್ತು ಕೊರಾನ್ ನಲ್ಲಿ, ಪರ್ಷಿಯನ್ ಮತ್ತು ಅರೇಬಿಕ್ ಸಾಹಿತ್ಯವನ್ನು ಪಾಟ್ನಾದಲ್ಲಿ ಅಧ್ಯಯನ ಮಾಡಿದ್ದರು. ರಾಮ್ ಮೋಹನ್ ರಾಯ್ ಅವರು ಜೈನ ಧರ್ಮ ಮತ್ತು ಭಾರತದ ಇತರ ಧಾರ್ಮಿಕ ಚಳುವಳಿಗಳು ಮತ್ತು ಪಂಥಗಳ ಬಗ್ಗೆ ಚೆನ್ನಾಗಿ ಪರಿಚಿತರಾಗಿದ್ದರು. ರಾಮ್ ಮೋಹನ್ ರಾಯ್ ಅವರು ಪಾಶ್ಚಿಮಾತ್ಯ ಚಿಂತನೆ ಮತ್ತು ಸಂಸ್ಕೃತಿಯ ಅಧ್ಯಯನ ಮಾಡಿದರು. ಬೈಬಲ್ ಅನ್ನು ಮೂಲ ರೂಪದಲ್ಲಿ ಅಧ್ಯಯನ ಮಾಡಲು ಅವರು ಗ್ರೀಕ್ ಮತ್ತು ಹೀಬ್ರೂ ಭಾಷೆಗಳನ್ನು ಕಲಿತರು.

1809 ರಲ್ಲಿ, ರಾಮ್ ಮೋಹನ್ ರಾಯ್ ಅವರು ಪರ್ಷಿಯನ್ ಭಾಷೆಯಲ್ಲಿ ಏಕದೇವತಾವಾದಿಗಳಿಗೆ ತಮ್ಮ ಪ್ರಸಿದ್ಧ ಕೃತಿಯನ್ನು (Gift to Monotheists) ಬರೆದರು . ಈ ಕೃತಿಯಲ್ಲಿ, ಅವರು ಅನೇಕ ದೇವರುಗಳಲ್ಲಿ ನಂಬಿಕೆಯ ವಿರುದ್ಧ ಮತ್ತು ಒಂದೇ ದೇವರ ಆರಾಧನೆಗಾಗಿ ಗುರುತರವಾದ ವಾದಗಳನ್ನು ಮಂಡಿಸಿದರು. ರಾಮ್ ಮೋಹನ್ ರಾಯ್ 1814 ರಲ್ಲಿ ಕಲ್ಕತ್ತಾದಲ್ಲಿ ನೆಲೆಸಿದರು ಮತ್ತು ಯುವಕರನ್ನು ಆಕರ್ಷಿಸಿದರು ಮತ್ತು ಅವರ ಸಹಕಾರದೊಂದಿಗೆ ಅವರು ‘ಆತ್ಮೀಯ ಸಭೆ’ಯನ್ನು ಪ್ರಾರಂಭಿಸಿದರು .

ರಾಮ್ ಮೋಹನ್ ರಾಯ್ ಅವರು ವಿಗ್ರಹಗಳ ಆರಾಧನೆ, ಜಾತಿಯ ಬಿಕ್ಕಟ್ಟು ಮತ್ತು ಅರ್ಥಹೀನ ಧಾರ್ಮಿಕ ಆಚರಣೆಗಳ ಪ್ರಾಬಲ್ಯವನ್ನು ತೀವ್ರವಾಗಿ ವಿರೋಧಿಸಿದರು. ಪುರೋಹಿತಶಾಹಿ ವರ್ಗವು ಈ ಆಚರಣೆಗಳನ್ನು ಪ್ರೋತ್ಸಾಹಿಸುತ್ತಿರುವುದನ್ನು ಖಂಡಿಸಿದರು. ಹಿಂದೂಗಳ ಎಲ್ಲಾ ಪ್ರಮುಖ ಪುರಾತನ ಗ್ರಂಥಗಳು ಏಕದೇವತಾವಾದ ಅಥವಾ ಒಬ್ಬ ದೇವರ ಆರಾಧನೆಯನ್ನು ಬೋಧಿಸುತ್ತವೆ ಎಂದು ರಾಯ್ ಅಭಿಪ್ರಾಯಪಟ್ಟರು.

ರಾಯ್ ಅವರು ತಮ್ಮ ಅಭಿಪ್ರಾಯವನ್ನು ಸಾಬೀತುಪಡಿಸಲು ವೇದಗಳ ಮತ್ತು ಐದು ಪ್ರಮುಖ ಉಪನಿಷತ್ತುಗಳನ್ನು ಬಂಗಾಳಿ ಭಾಷೆಯಲ್ಲಿ ಅನುವಾದಿಸಿ ಪ್ರಕಟಿಸಿದರು. ಅವರು ಏಕದೇವೋಪಾಸನೆಯನ್ನು ರಕ್ಷಿಸಲು ಕರಪತ್ರಗಳು ಮತ್ತು ಕರಪತ್ರಗಳ ಸರಣಿಯನ್ನು ಸಹ ಬರೆದರು. ಕ್ರಿಸ್ತನ ಉನ್ನತ-ನೈತಿಕ ಸಂದೇಶವನ್ನು ಹಿಂದೂ ಧರ್ಮದಲ್ಲಿ ಅಳವಡಿಸಬೇಕೆಂದು ರಾಯ್ ಬಯಸಿದ್ದರು. ಇದು ಅವರಿಗೆ ಮಿಷನರಿಗಳ ಹಗೆತನವನ್ನು ಗಳಿಸಿತು.ರಾಯ್ ಅವರು ಮಿಷನರಿಗಳ ದಾಳಿಯಿಂದ ಹಿಂದೂ ಧರ್ಮ ಮತ್ತು ತತ್ವಶಾಸ್ತ್ರವನ್ನು ಬಲವಾಗಿ ಸಮರ್ಥಿಸಿಕೊಂಡರು. ಅದೇ ಸಮಯದಲ್ಲಿ, ಅವರು ಇತರ ಧರ್ಮಗಳ ಬಗ್ಗೆ ಅತ್ಯಂತ ಸ್ನೇಹಪರ ಮನೋಭಾವವನ್ನು ಅಳವಡಿಸಿಕೊಂಡರು. ಮೂಲಭೂತವಾಗಿ ಎಲ್ಲಾ ಧರ್ಮಗಳು ಸಾಮಾನ್ಯ ಸಂದೇಶವನ್ನು ಬೋಧಿಸುತ್ತವೆ ಎಂದು ನಂಬಿದ್ದರು.

ಬ್ರಹ್ಮಸಮಾಜ ಸ್ಥಾಪನೆ.

1829 ರಲ್ಲಿ, ರಾಯ್ ಅವರು “ಬ್ರಹ್ಮ ಸಭಾ” ಎಂಬ ಹೊಸ ಧಾರ್ಮಿಕ ಸಮಾಜವನ್ನು ಸ್ಥಾಪಿಸಿದರು , ನಂತರ ಇದನ್ನು “ಬ್ರಹ್ಮ ಸಮಾಜ” ಎಂದು ಕರೆಯಲಾಯಿತು, ಇದರ ಉದ್ದೇಶ ಹಿಂದೂ ಧರ್ಮವನ್ನು ಶುದ್ಧೀಕರಿಸುವುದು ಮತ್ತು ಆಸ್ತಿಕತೆ ಅಥವಾ ಏಕ ದೇವರ ಆರಾಧನೆಯನ್ನು ಬೋಧಿಸುವುದು. ಹೊಸ ಸಮಾಜವು ವೇದಗಳು ಮತ್ತು ಉಪನಿಷತ್ತುಗಳನ್ನು ಆಧರಿಸಿದೆ ಎಂದು ಸಾರಿದರು. ಬ್ರಹ್ಮ ಸಮಾಜವು ಮಾನವ ಘನತೆಗೆ ಒತ್ತು ನೀಡಿತು, ವಿಗ್ರಹಾರಾಧನೆಯನ್ನು ವಿರೋಧಿಸಿತು ಮತ್ತು ಸತಿ ಆಚರಣೆಯಂತಹ ಸಾಮಾಜಿಕ ಅನಿಷ್ಟಗಳನ್ನು ಟೀಕಿಸಿತು.

ಶಿಕ್ಷಣದಲ್ಲಿನ ಕೊಡುಗೆಗಳು.

ರಾಮ್ ಮೋಹನ್ ರಾಯ್ ಅವರು ಆಧುನಿಕ ಶಿಕ್ಷಣದ ಆರಂಭಿಕ ಪ್ರಚಾರಕರಲ್ಲಿ ಒಬ್ಬರು, ಅವರು ದೇಶದಲ್ಲಿ ಆಧುನಿಕ ವಿಚಾರಗಳ ಹರಡುವಿಕೆಗೆ ಪ್ರಮುಖ ಸಾಧನವಾದರು. ವಾಚ್ ಮೇಕರ್ ಆಗಿ 1800 ರಲ್ಲಿ ಭಾರತಕ್ಕೆ ಬಂದ ಡೇವಿಡ್ ಹೇರ್, ದೇಶದಲ್ಲಿ ಆಧುನಿಕ ಶಿಕ್ಷಣದ ಪ್ರಚಾರದಲ್ಲಿ ತಮ್ಮ ಇಡೀ ಜೀವನವನ್ನು ಕಳೆದರು, ಅವರು 1817ರಲ್ಲಿ ಪ್ರಸಿದ್ಧ ಹಿಂದೂ ಕಾಲೇಜನ್ನು ಸ್ಥಾಪಿಸಿದರು. ರಾಮ್ ಮೋಹನ್ ರಾಯ್ ಅವರು ತಮ್ಮ ಶೈಕ್ಷಣಿಕ ಯೋಜನೆಗಳನ್ನು ಡೇವಿಡ್ ಜೊತೆಗೆ ಉತ್ಸಾಹಭರಿತದಿಂದ ಹಂಚಿಕೊಂಡರು. ರಾಯ್ 1817 ರಿಂದ ಕಲ್ಕತ್ತಾದಲ್ಲಿ ಇಂಗ್ಲಿಷ್ ಶಾಲೆಯನ್ನು ತನ್ನ ಸ್ವಂತ ವೆಚ್ಚದಲ್ಲಿ ನಿರ್ವಹಿಸಿದರು, ಇದರಲ್ಲಿ ಇತರ ವಿಷಯಗಳ ಜೊತೆಗೆ, ಯಂತ್ರಶಾಸ್ತ್ರ ಮತ್ತು ವೋಲ್ಟೇರ್ ಅವರ ತತ್ವಶಾಸ್ತ್ರವನ್ನು ಕಲಿಸಲಾಯಿತು. 1825 ರಲ್ಲಿ, ರಾಯ್ ವದಂತ(vadanta) ಕಾಲೇಜನ್ನು ಸ್ಥಾಪಿಸಿದರು, ಇದರಲ್ಲಿ ಭಾರತೀಯ ಕಲಿಕೆ ಮತ್ತು ಪಾಶ್ಚಿಮಾತ್ಯ ಸಾಮಾಜಿಕ ಮತ್ತು ಭೌತಿಕ ವಿಜ್ಞಾನಗಳ ಕೋರ್ಸ್‌ಗಳನ್ನು ಕಲಿಸಲಾಯಿತು.

ರಾಷ್ಟ್ರೀಯ ಪ್ರಜ್ಞೆ ಬಿತ್ತಿದ ಪುರುಷ.

ರಾಮ್ ಮೋಹನ್ ರಾಯ್ ಅವರು ಭಾರತದಲ್ಲಿ ರಾಷ್ಟ್ರೀಯ ಪ್ರಜ್ಞೆಯ ಉದಯದ ಮಿನುವಾಗಿ ಪ್ರತಿನಿಧಿಸಿದರು. ರಾಯ್ ಅವರು ಜಾತಿ ವ್ಯವಸ್ಥೆಯ ಬಿಕ್ಕಟ್ಟುಗಳನ್ನು ವಿರೋಧಿಸಿದರು, ಜಾತಿಯು ನಮ್ಮ ನಡುವಿನ ಏಕತೆಯ ಕೊರತೆಯ ಮೂಲವಾಗಿದೆ” ಎಂದು ಘೋಷಿಸಿದರು. ಜಾತಿ ವ್ಯವಸ್ಥೆಯು ಎರಡು ಬಗೆಯ ದುಷ್ಟತಯಿಂದ ಕೂಡಿದೆ ಎಂದು ಅವರು ನಂಬಿದ್ದರು: ಇದು ಅಸಮಾನತೆಯನ್ನು ಸೃಷ್ಟಿಸಿ ಜನರನ್ನು ವಿಭಜಿಸಿತು ಮತ್ತು ದೇಶಭಕ್ತಿಯ ಭಾವನೆಯನ್ನು ವಂಚಿಸಿತು ಎಂದು ಹೇಳಿದರು.

ಪತ್ರಿಕೋದ್ಯಮದಲ್ಲಿ ರಾಯ್.

ರಾಮ್ ಮೋಹನ್ ರಾಯ್ ಅವರು ಭಾರತೀಯ ಪತ್ರಿಕೋದ್ಯಮದ ಪ್ರವರ್ತಕರು. ಜನರಲ್ಲಿ ವೈಜ್ಞಾನಿಕ ಸಾಹಿತ್ಯ ಮತ್ತು ರಾಜಕೀಯ ಜ್ಞಾನವನ್ನು ಹರಡಲು, ಪ್ರಸ್ತುತ ಆಸಕ್ತಿಯ ವಿಷಯಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಮತ್ತು ಸರ್ಕಾರದ ಮುಂದೆ ಜನಪ್ರಿಯ ಬೇಡಿಕೆಗಳು ಮತ್ತು ಕುಂದುಕೊರತೆಗಳನ್ನು ಪ್ರತಿನಿಧಿಸಲು ಅವರು ಬಂಗಾಳಿ, ಪರ್ಷಿಯನ್, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಿಯತಕಾಲಿಕಗಳನ್ನು ಹೊರತಂದರು. ರಾಯ್ ಅವರು ದೇಶದ ರಾಜಕೀಯ ಕುರಿತ ಪ್ರಶ್ನೆಗಳ ಮೇಲೆ ಸಾರ್ವಜನಿಕ ಆಂದೋಲನವನ್ನು ಪ್ರಾರಂಭಿಸಿದರು. ಬಂಗಾಳದ ಜಮೀನ್ದಾರರ ದಬ್ಬಾಳಿಕೆಯ ಆಚರಣೆಗಳನ್ನು ರಾಯ್ ಖಂಡಿಸಿದರು, ಇದು ರೈತರ ಶೋಚನೀಯ ಸ್ಥಿತಿಯನ್ನು ಸುಧಾರಿಸಿತು.

1793ರ ಖಾಯಂ ವಸಾಹತು ಲಾಭವನ್ನು ರೈತರೂ ಅನುಭವಿಸುವಂತಾಗಲು ಭೂಮಿಯನ್ನು ನಿಜವಾದ ಸಾಗುವಳಿದಾರರು ಪಾವತಿಸುವ ಗರಿಷ್ಠ ಬಾಡಿಗೆಯನ್ನು ಶಾಶ್ವತವಾಗಿ ನಿಗದಿಪಡಿಸಬೇಕು ಎಂದು ರಾಯ್ ಒತ್ತಾಯಿಸಿದರು.ತೆರಿಗೆ ಮುಕ್ತ ಭೂಮಿಗೆ ತೆರಿಗೆ ವಿಧಿಸುವ ಪ್ರಯತ್ನಗಳ ವಿರುದ್ಧವೂ ರಾಯ್ ಪ್ರತಿಭಟಿಸಿದರು. ರಾಯ್ ಕಂಪನಿಯ ವ್ಯಾಪಾರ ಹಕ್ಕುಗಳನ್ನು ರದ್ದುಗೊಳಿಸಬೇಕು ಮತ್ತು ಭಾರತೀಯ ಸರಕುಗಳ ಮೇಲಿನ ಭಾರೀ ರಫ್ತು ಸುಂಕವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು. ಉನ್ನತ ಸೇವೆಗಳ ಭಾರತೀಕರಣ, ಕಾರ್ಯಾಂಗ ಮತ್ತು ನ್ಯಾಯಾಂಗದ ಪ್ರತ್ಯೇಕತೆ, ತೀರ್ಪುಗಾರರ ವಿಚಾರಣೆ ಮತ್ತು ಭಾರತೀಯರು ಮತ್ತು ಯುರೋಪಿಯನ್ನರ ನಡುವಿನ ನ್ಯಾಯಾಂಗ ಸಮಾನತೆಯ ಬೇಡಿಕೆಗಳನ್ನು ರಾಯ್ ಪ್ರಸ್ತಾಪಿಸಿದರು.

 

ರಾಮ್ ಮೋಹನ್ ರಾಯ್ ಅವರು ಅಂತರರಾಷ್ಟ್ರೀಯ ಘಟನೆಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರು ಮತ್ತು ಎಲ್ಲೆಡೆ ಅವರು ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯ ಕಾರಣವನ್ನು ಬೆಂಬಲಿಸಿದರು ಮತ್ತು ಪ್ರತಿ ಹಂತದಲ್ಲಿದಲ್ಲಿ ಅನ್ಯಾಯ, ದಬ್ಬಾಳಿಕೆ ಮತ್ತು ದೌರ್ಜನ್ಯವನ್ನು ವಿರೋಧಿಸಿದರು.